ಉದ್ಯಮಿ ದಿವಾಕರ ದಾಸ್‌ರವರಿಂದ ಮೈಸೂರು ಡಿಸಿಯವರಿಗೆ ಚೆಕ್ ಹಸ್ತಾಂತರ



ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ತಾಯಿಯ ಸನ್ನಿಧಾನಕ್ಕೆ ಆಷಾಢ ಮಾಸದಲ್ಲಿ ವಿಶೇಷವಾಗಿ ಭಕ್ತಾದಿಗಳು ಪಾದಾಯಾತ್ರೆಯ ಮೂಲಕ ಮತ್ತು ಅನೇಕ ಭಕ್ತಾದಿಗಳು ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಈ ವಿಶೇಷ ಸಂದರ್ಭದಲ್ಲಿ ಪ್ರತೀ ಆಷಾಢ ಶುಕ್ರವಾರದಂದು ಒಂದುವರೆ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಬಂದು ತಾಯಿಯ ದರ್ಶನ ಪಡೆಯುತ್ತಾರೆ.

ಈ ವಿಶೇಷ ಸಂದರ್ಭದಲ್ಲಿ ಕೊಡುಗೈ ದಾನಿಗಳಾದ ಉದ್ಯಮಿ ದಿವಾಕರ್ ದಾಸ್ ರವರು ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಪ್ರೈ.ಲಿ ಸಂಸ್ಥೆಯಿಂದ ಭಕ್ತಾದಿಗಳಿಗೆ ಡ್ರೈಫ್ರೂಟ್ಸ್ ಮತ್ತು ಪ್ರಸಾದ ವಿತರಣೆಗೋಸ್ಕರ ತಮ್ಮ ಸಂಸ್ಥೆಯಿಂದ 5 ಲಕ್ಷ ರೂ. ನೀಡಿದರು.
ಮೈಸೂರು ಜಿಲ್ಲಾಧಿಕಾರಿಯವರಾದ ಲಕ್ಷ್ಮೀಕಾಂತ್ ರೆಡ್ಡಿಯವರಿಗೆ 5 ಲಕ್ಷ ರೂ. ಚೆಕ್‌ನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ ಕುಮಾರ್, ಮೈಸೂರು ಡಿಸಿಸಿ ಪ್ರಧಾನ ಕಾರ್ಯದರ್ಶಿ Ln. ಜಯರಾಮ್, ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷರಾದ ಮಲ್ಲೇಶ್, ಉದ್ಯಮಿಗಳು ಜೆಜೆ ಆನಂದ್, ಜಿಕೆ ಫೌಂಡೇಶನ್ ಬೆಂಗಳೂರು ಇದರ ಅಧ್ಯಕ್ಷರಾದ ಮಹೇಶ್, ಡಿಸಿಸಿ ಕಾರ್ಯದರ್ಶಿ ರಾಹುಲ್ ಮೊದಲಾದವರು ಉಪಸ್ಥಿತರಿದ್ದರು.
