Tuesday, July 1, 2025
spot_imgspot_img
spot_imgspot_img

ರಾತ್ರೋರಾತ್ರಿ ಸ್ಟಾರ್​​ ಆಯ್ತು ವಿಶ್ವದ ಅತೀ ಚಿಕ್ಕ ಹಸು..!

- Advertisement -
- Advertisement -

ಬಾಂಗ್ಲಾದೇಶದಲ್ಲಿ ಹುಟ್ಟಿರುವ ಕುಬ್ಜ ಹಸುವೊಂದು ರಾತ್ರೋರಾತ್ರಿ ಮೀಡಿಯಾ ಸ್ಟಾರ್​​ ಆಗಿಬಿಟ್ಟಿದೆ. ಈ ಕುಬ್ಜ ಹಸುವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಅಪರೂಪದ ಹಸು ನೋಡಿ ಜನ ಆಶ್ಚರ್ಯಕ್ಕೊಳಗಾಗುತ್ತಿದ್ದಾರೆ.

ಹೌದು, ಇತ್ತೀಚೆಗೆ 51 ಸೆಂಟಿಮೀಟರ್​​​ ಇರುವ ಈ ಕುಬ್ಜ ಹಸು ಫೋಟೋಗಳು ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿವೆ. ಈ ಫೋಟೋಗಳನ್ನು ನೋಡಿದ ಕೂಡಲೇ ಜನ ಹೇಗಾದರೂ ಸರಿ ಕುಬ್ಜ ಹಸು ನೋಡಲೇಬೇಕು ಎಂದು ದೌಡಾಯಿಸುತ್ತಿದ್ದಾರೆ.

ತೀವ್ರ ಕೊರೊನಾ ಲಾಕ್ಡೌನ್​​ ನಡುವೆಯೂ ಸಂಚಾರ ವ್ಯವಸ್ಥೆಯಿಲ್ಲದಿದ್ದರೂ ಹೋಗಿ ಬಾಂಗ್ಲಾದೇಶದ ಚಾರಿಗ್ರಾಮ್​ ಎಂಬ ಗ್ರಾಮದಲ್ಲಿರುವ ಈ ಹಸುವನ್ನು ನೋಡಿ ಬರುತ್ತಿದ್ದಾರೆ.

ಈ ಹಸು 26 ಕೆಜಿ ತೂಕ ಇದೆ. ಸದ್ಯ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ನಲ್ಲಿರುವ ಚಿಕ್ಕ ಹಸುವಿಗಿಂತಲೂ 10 ಸೆಂಟಿಮೀಟರ್​ ಚಿಕ್ಕದಾಗಿದೆ. ಈ ಹಸುವನ್ನು ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ಸ್​​ಗೆ ಸೇರಿಸಲು ಮೂರು ತಿಂಗಳಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಈ ಹಸುವನ್ನು ವೀಕ್ಷಿಸಲು ಬಂದಿದ್ದಾರೆ ಎನ್ನಲಾಗುತ್ತಿದೆ.

- Advertisement -

Related news

error: Content is protected !!