Sunday, September 13, 2026
spot_imgspot_img
spot_imgspot_img

ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯ, ಪ್ರೀತಿಸಿ ಮದುವೆ -ಎರಡೇ ತಿಂಗಳಲ್ಲಿ ಪತ್ನಿಯನ್ನು ನಿರಾಕರಿಸಿದ ಪತಿ!

- Advertisement -
- Advertisement -

ಬೆಂಗಳೂರು: ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾಗಿ ಒಂದು ವರ್ಷದ ಪ್ರೀತಿಗೆ ಮದುವೆಯಾದ ಎರಡೇ ತಿಂಗಳಲ್ಲಿ ಸಣ್ಣಪುಟ್ಟ ಗಲಾಟೆಯಾಗಿ ಪತಿ ಪತ್ನಿಯನ್ನೇ ಬೇಡ ಎಂದು ತಿರಸ್ಕರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನನಗೆ ಗಂಡ ಬೇಕು ಎಂದು ನೊಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಮಹಿಳೆ ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾಗಿದ್ದ ಚೇತನ್ ಜೊತೆ 2 ತಿಂಗಳ ಜೊತೆ ವಿವಾಹವಾಗಿದ್ದರು. ಮೂಲತಃ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿಯಾಗಿರುವ ಚೇತನ್ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು.

ಇನ್ನೂ ತಂದೆ-ತಾಯಿ ಇಲ್ಲದ ಮಹಿಳೆಯನ್ನು ಮದುವೆಯಾಗಿದ್ದ ಚೇತನ್, ಮನೆಯಲ್ಲಿ ತಂದೆ ತಾಯಿಗೆ ಗೌರವ ಕೊಡಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ, ಎರಡೇ ತಿಂಗಳಲ್ಲಿ ಜಗಳ ತಾರಕಕ್ಕೇರಿ ಹೆಂಡತಿ ಬೇಡ ಎಂದು ಚೇತನ್ ಆಕೆಯನ್ನು ತಿರಸ್ಕರಿಸಿದ್ದಾನೆ.

ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!