Saturday, May 18, 2024
spot_imgspot_img
spot_imgspot_img

ಕಲಾತಪಸ್ವಿ ಸಾಂಸ್ಕೃತಿಕ ತಂಡದ ವತಿಯಿಂದ ಸ್ನೇಹ ಪರ್ವ -2023 ಭಾವಚಿತ್ರ ಸ್ಪರ್ಧೆ

- Advertisement -G L Acharya panikkar
- Advertisement -

ಕಲಾತಪಸ್ವಿ ಸಾಂಸ್ಕೃತಿಕ ತಂಡ ಆರಂಭವಾದ ಒಂದೇ ವರ್ಷದಲ್ಲಿ ವಿನೂತನವಾದ ಕಾರ್ಯಕ್ರಮಗಳು,ಸೇವಾ ನಿಧಿ ಯೋಜನೆಗಳು, ವಿವಿಧ ಬಗೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಯಶಸ್ವಿ ಒಂದು ಕಲಾತಂಡ.

40-50 ಯುವ ಪ್ರತಿಭೆಗಳನ್ನು ಒಳಗೊಂಡ ಈ ತಂಡ ಪ್ರತಿ ತಿಂಗಳು ಒಂದಲ್ಲ ಒಂದು ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಕಲಾಭಿಮಾನಿಗಳ ಮನಸ್ಸಲ್ಲಿ ಶಾಶ್ವತವಾದ ನೆಲೆಯನ್ನು ಕಂಡುಕೊಳ್ಳಲು ಯಶಸ್ವಿಯಾಗಿದೆ.

ಕಲಾತಪಸ್ವಿ ಸಾಂಸ್ಕೃತಿಕ ತಂಡ ಯುವ ಪ್ರತಿಭೆಗಳಿಗೋಸ್ಕರ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಿ ಅದರಲ್ಲಿ ಬಹಳಷ್ಟು ಯಶಸ್ಸನ್ನು ಕಂಡಿತ್ತು. ಆ ಸಾಲಿಗೆ ಹೊಸದೊಂದು ಸೇರ್ಪಡೆಯಾಗಿ, ಕಲಾತಪಸ್ವಿ ಸೇವಾನಿಧಿ ಅಭಿಯಾನದ ನಿಮಿತ್ತ,ರಕ್ತ ಸಂಬಂಧವನ್ನೂ ಮೀರಿಸುವ ಅನುಬಂಧವಾದ ಸ್ನೇಹವನ್ನುಸಂಭ್ರಮಿಸುವ ಹೊಚ್ಚ ಹೊಸ ಭಾವಚಿತ್ರ ಸ್ಪರ್ಧೆ “ಸ್ನೇಹ ಪರ್ವ -2023″ನ್ನು ಆಯೋಜಿಸಲು ಮುಂದಾಗಿದೆ.


ಆನ್ಲೈನ್ ಸ್ಪರ್ಧೆ ಇದಾಗಿದ್ದು 16-09-2023ರಿಂದ 25-11-2023ರ ವರೆಗೆ ಈ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಿಂದ ಬರುವ ಹಣವನ್ನು ಕಷ್ಟದಲ್ಲಿರುವವರಿಗೆ ಸೇವಾನಿಧಿ ರೂಪದಲ್ಲಿ ನೀಡಬೇಕೆಂದು ತಂಡ ನಿರ್ಧರಿಸಿಕೊಂಡಿದೆ.

ವಿಜೇತರಿಗೆ ಬಹುಮಾನ ರೂಪವಾಗಿ
ಪ್ರಥಮ :3,001 ನಗದು +ಕಲಾತಪಸ್ವಿ ಟ್ರೋಫಿ +ಪ್ರಶಸ್ತಿ ಪತ್ರ
ದ್ವಿತೀಯ : 2,001 ನಗದು + ಕಲಾತಪಸ್ವಿ ಟ್ರೋಫಿ + ಪ್ರಶಸ್ತಿ ಪತ್ರ
ತೃತೀಯ : 1,001 ನಗದು +ಕಲಾತಪಸ್ವಿ ಟ್ರೋಫಿ + ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

:ಜೈದೀಪ್ ಅಮೈ 7090615880

- Advertisement -

Related news

error: Content is protected !!