Wednesday, October 14, 2026
spot_imgspot_img
spot_imgspot_img

ಸಮರ್ಪಕ ಕಸ ವಿಲೇವಾರಿಗಾಗಿ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಬಜಾಲ್ ರವರ ಹೊಸ ಹೆಜ್ಜೆ

- Advertisement -
- Advertisement -

ಸಂಪಾಜೆಯಿಂದ ಮಂಗಳೂರು ತನಕ ಕಾಲ್ನಡಿಗೆಯ ಮೂಲಕ 'ಸ್ವಚ್ಛತಾ ದಂಡಯಾತ್ರೆ'

ಸಮರ್ಪಕ ಕಸ ವಿಲೇವಾರಿಗಾಗಿ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಬಜಾಲ್ ವಿಶೇಷ ಹೆಜ್ಜೆ ಇಟ್ಟಿದ್ದಾರೆ. ಕೊಡಗಿನ ಗಡಿ ಸಂಪಾಜೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತನಕ ‘ಸ್ವಚ್ಛತಾ ದಂಡಯಾತ್ರೆ’ ಕೈಗೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಅ.9ರಂದು ಸಂಪಾಜೆಯಿಂದ ಆರಂಭಗೊಂಡಿರುವ ಸ್ವಚ್ಛತಾ ದಂಡಯಾತ್ರೆ ಎಂಬ ಪಾದಯಾತ್ರೆ 17ರಂದು ಮಂಗಳೂರಿನಲ್ಲಿ ಸಮಾಪನಗೊಳ್ಳಲಿದೆ.

ಈ ಯಾತ್ರೆಯು ಮಾಣಿ ಮೈಸೂರು ರಸ್ತೆಯಲ್ಲಿ ಸಾಗುತ್ತಿದ್ದು, ರಸ್ತೆ ಬದಿಯಲ್ಲಿ ಎಸೆಯಲಾಗಿರುವ ಕಸವನ್ನು ಸಂಗ್ರಹಿಸಿ ವಿಲೇವಾರಿಗಾಗಿ ಪಂಚಾಯಿತಿಗೆ ನೀಡುವ ಅವರು ಕೆಲಸವನ್ನು ಮಾಡುತ್ತಿದ್ದಾರೆ. ಮಂಗಳವಾರ ಅವರ ದಂಡಯಾತ್ರೆಯು ಪುತ್ತೂರಿಗೆ ಆಗಮಿಸಿದೆ.

ಅವರು ಕೈಯಲ್ಲಿ ಕಸದ ಗೋಣಿಯನ್ನು ಹಿಡಿದುಕೊಂಡು ಸ್ವಚ್ಛತೆಯ ಸಂಕಲ್ಪದೊಂದಿಗೆ ‘ಸ್ವಚ್ಛ ದಂಡಯಾತ್ರೆ’ ಎಂಬ ನಾಮಫಲಕ ಹಿಡಿದುಕೊಂಡು ರಸ್ತೆಯಲ್ಲಿ ಸ್ವಚ್ಛತೆಯ ಸಂದೇಶ ಸಾರುತ್ತಾ ಮಂಗಳೂರಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ಅವರ ಸ್ವಚ್ಛತಾ ದಂಡಯಾತ್ರೆಯು ಅ.9ರಂದು ಸುಳ್ಯ ತಾಲೂಕಿನ ಸಂಪಾಜೆಯಿಂದ ಆರಂಭಗೊಂಡಿದ್ದು, ಅ. 17 ರ ತನಕ ನಡೆದು ಅ. 17ರಂದು ಮಂಗಳೂರಿನಲ್ಲಿ ಸಮಾಪನಗೊಳ್ಳಲಿದೆ. ಅ.9ರಂದು ಸಂಪಾಜೆಯಿಂದ ಅರಂತೋಡು ತನಕ, ಅ. 10ರಂದು ಅರಂತೋಡುನಿಂದ ಸುಳ್ಯ ತನಕ, ಅ.11ರಂದು ಸುಳ್ಯದಿಂದ ಜಾಲ್ಲೂರು ತನಕ, ಅ.12ರಂದು ಜಾಲ್ಲೂರಿನಿಂದ ಪುತ್ತೂರು ತಾಲೂಕಿನ ಕಾವು ತನಕ, ಅ. 13ರಂದು ಕಾವಿನಿಂದ ಪುತ್ತೂರು ತನಕ ನಡೆಯಿತು. ಅ. 14ರಂದು ಪುತ್ತೂರಿನಿಂದ ಮಾಣಿ, ಮಾಣಿಯಿಂದ ಕಲ್ಲಡ್ಕ, ಅ.16ರಂದು ಕಲ್ಲಡ್ಕದಿಂದ 15ರಂದು ಬಿಸಿ ರೋಡ್, ಅ. 17ರಂದು ಬಿಸಿ ರೋಡ್‌ನಿಂದ ಮಂಗಳೂರು ತನಕ ಸಾಗಿ ಸಮಾಪನಗೊಳ್ಳಲಿದೆ.

ದಾರಿಯಲ್ಲಿ ಪಂಚಾಯತ್‌ಗಳು, ಸಿಗುವ ಸಂಸ್ಥೆಗಳು, ಶಾಲಾ ಕಾಲೇಜ್‌ಗಳು, ಯುವಕರುಮತ್ತು ಸಾರ್ವಜನಿಕರನ್ನು ಜೊತೆಗೂಡಿ ನಾಗರಾಜ್ ಬಜಾಲ್ ಅವರ ದಂಡಯಾತ್ರೆ ಸಾಗುತ್ತಿದೆ.

ನನ್ನದು ಸಮುದ್ರದಿಂದ ಬೊಗಸೆ ನೀರೆತ್ತುವ ಕಾರ್ಯ ಮಾತ್ರ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ. ಕಸದ ಸಮರ್ಪಕ ನಿರ್ವಹಣೆಯ ಬಗ್ಗೆ ಜನರಲ್ಲಿ ಜಾಗೃತಿ ಉಂಟಾಗಬೇಕಾಗಿದೆ. ನನ್ನ ಕೆಲಸ ನೋಡಿ ಶೇ. 50 ರಷ್ಟು ಮಂದಿಯಲ್ಲಿ ಈ ಜಾಗೃತಿ ಉಂಟಾದಲ್ಲಿ ನನ್ನ ಶ್ರಮ ಸಾರ್ಥಕ ಎನ್ನುತ್ತಾರೆ ನಾಗರಾಜ್ ಬಜಾಲ್ ಅವರು.

ಯಾತ್ರೆಯ ಸಂದರ್ಭ ಪಂಚಾಯಿತಿವರು ತಮ್ಮ ಕಸ ಸಾಗಾಟದ ವಾಹನಗಳನ್ನು ಒದಗಿಸುವುದರ ಜೊತೆಗೆ ಪಿಡಿಒಗಳು ಇನ್ನಿತರ ಅಧಿಕಾರಿಗಳು ಭಾಗವಹಿಸಿ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ಹಸಿರುದಳ ಸ್ವಯಂ ಸೇವಾ ಸಂಸ್ಥೆಯ ಮೂಲಕ ದ.ಕ. ಜಿಲ್ಲೆಯ 10 ಗ್ರಾಮ ಪಂಚಾಯಿತಿಗಳಲ್ಲಿ ‘ಶೂನ್ಯ ಕಸ ಉತ್ಪಾದನೆ’ ಗುರಿಯಲ್ಲಿ ಕೆಲಸ ಮಾಡುವ ಮೂಲಕ ನಾಗರಾಜ್ ಬಜಾಲ್ ಸ್ವಚ್ಛತಾ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯವಾಗಿದೆ.

- Advertisement -

Related news

error: Content is protected !!