ದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಯಶಸ್ವಿ ನಾಯಕರಲ್ಲೊಬ್ಬರಾದ ಸೌರವ್ ಗಂಗೂಲಿಗೆ 48ನೇ ಜನ್ಮದಿನದ ಸಂಭ್ರಮ. ಹಾಗೂ ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ,ಭಾರತ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರೇ ಗಂಗೂಲಿ. ಅಭಿಮಾನಿಗಳು ಮತ್ತು ಸಹ-ಆಟಗಾರರಿಂದ ಪ್ರೀತಿಯಿಂದ ‘ದಾದಾ’ ಎಂದು ಕರೆಸಿಕೊಳ್ಳುವ ಅವರು ಈಗ ತಮ್ಮ ನಾಯಕತ್ವ ಗುಣದಿಂದ ಬಿಸಿಸಿಐನಲ್ಲೂ ದಕ್ಷ ಆಡಳಿತದ ಮೂಲಕ ಕ್ರಿಕೆಟ್ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ.
ಎಡಗೈ ಬ್ಯಾಟ್ಸ್‌ಮನ್ ಆಗಿ ಭಾರತ ಪರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಸಿಡಿಸಿದ ಸಾಧನೆ ಮಾಡಿರುವ ಗಂಗೂಲಿ, 113 ಟೆಸ್ಟ್‌ಗಳಲ್ಲಿ 16 ಶತಕಗಳ ಸಹಿತ 7,212 ರನ್ ಮತ್ತು 311 ಏಕದಿನ ಪಂದ್ಯಗಳಲ್ಲಿ 22 ಶತಕಗಳ ಸಹಿತ 11,363 ರನ್ ಬಾರಿಸಿದ್ದಾರೆ. 2002ರಲ್ಲಿ ಇಂಗ್ಲೆಂಡ್‌ನಲ್ಲಿ ದಾಖಲೆ ಚೇಸಿಂಗ್ ಮೂಲಕ ನಾಟ್‌ವೆಸ್ಟ್ ಸರಣಿ ಜಯಿಸಿದ್ದು ಮತ್ತು ಲಾರ್ಡ್ಸ್ ಬಾಲ್ಕನಿಯಲ್ಲಿ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದು ಕೂಡ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಸ್ಥಾನ ಪಡೆದಿದೆ.