Sunday, January 26, 2025
spot_imgspot_img
spot_imgspot_img

4 ನೇ ಟೆಸ್ಟ್‌: ಮೊದಲ ದಿನ ಆಸ್ಟ್ರೇಲಿಯಾ ಬ್ಯಾಟರ್‌ಗಳ ಮೇಲುಗೈ

- Advertisement -
- Advertisement -

ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಮೇಲುಗೈ ಸಾಧಿಸಿದರು. ಭಾರತ ಬೌಲರ್‌ಗ ಮೇಲೆ ಸವಾರಿ ಮಾಡಿದ ಆಸೀಸ್, ಮೊದಲ ದಿನದಾಟ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್ ಪೇರಿಸಿದೆ. 3.62ರ ಸರಾಸರಿಯಲ್ಲಿ ಕಾಂಗರೂ ಬ್ಯಾಟರ್‌ಗಳು ರನ್‌ ಗಳಿಸಿದರು ಪದಾರ್ಪಣೆ ಮಾಡಿದ 19 ವರ್ಷದ ಆರಂಭಿಕ ಆಟಗಾರ ಸಾಮ್ ಕೋನ್‌ಸ್ಟಾಸ್‌ ಹಾಗೂಉಸ್ಮಾನ್ ಖವಾಜ ಮೊದಲ ವಿಕೆಟ್‌ಗೆ 89 ರನ್ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ವೇಗವಾಗಿ ಆಡಿದ ಕೋನ್‌ಸ್ಟಾಸ್ ಭಾರತೀಯ ಬೌಲರ್‌ಗಳನ್ನು ದಂಡಿಸಿದರು.ಬೂಮ್ರಾ ಎಸೆತಗಳಿಗೆ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್ ಬಾರಿಸಿ ಹುಬ್ಬೇರಿಸಿದರು. ಕಲಾತ್ಮಕ ಹೊಡೆತಗಳ ಮೂಲಕ ಬೂಮ್ರಾ ಅವರ ಎಸೆತಗಳಲ್ಲಿ ರನ್ ಸೂರೆಗೈದರು.ಕೋನ್‌ಸ್ಟಾಸ್ 65 ಎಸೆತಗಳಲ್ಲಿ 60 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಅವರು ರವೀಂದ್ರ ಜಡೇಜಾ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.ಖವಾಜ (57), ಲಾಬುಷೇನ್ (72), ಸ್ಟೀವನ್ ಸ್ಕಿನ್ ಅಜೇಯ (68) ಅರ್ಧ ಶತಕ ಬಾರಿಸಿದರು.ಕಳೆದೆರಡು ಪಂದ್ಯದಲ್ಲಿ ಭಾರತಕ್ಕೆ ತಲೆನೋವಾಗಿದ್ದ ಟ್ರಾವಿಸ್ ಹೆಡ್‌ ಅವರನ್ನು ಬೂಮ್ರಾ ಶೂನ್ಯಕ್ಕೆ ಬೌಲ್ಡ್ ಮಾಡಿದರು. ಮಿಚೆಲ್ ಮಾರ್ಷ್ 4 ಮತ್ತು ಅಲೆಕ್ಸ್ ಕ್ಯಾರಿ 31 ರನ್ ಗಳಿಸಿದರು.ನಾಯಕ ಪಾಟ್ ಕಮಿನ್ಸ್ 8 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.ಭಾರತದ ಪರ ಬೂಮ್ರಾ3, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್‌ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಕಿತ್ತರು. ಈ ಪಂದ್ಯದಲ್ಲಿ ಭಾರತ ಎರಡು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಶುಭಮನ್‌ ಗಿಲ್ ಬದಲಿಗೆ ವಾಷಿಂಗ್ಟನ್ ಸುಂದ‌ರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

- Advertisement -

Related news

error: Content is protected !!