- Advertisement -
- Advertisement -


ಬಳಸಿದ ಕಾರ್ಪೆಟ್, ರಗ್, ಬೆಡ್ ಶೀಟ್ ಸೇರಿದಂತೆ ಅಕ್ರಮವಾಗಿ ಬಂದಿದ್ದ ಸಾವಿರಾರು ಕಂಟೇನರ್ ಗಳಲ್ಲಿ ತುಂಬಿದ್ದ ಕಸವನ್ನು ಇಂಗ್ಲೆಂಡ್’ಗೆ ಶ್ರೀಲಂಕಾ ವಾಪಸ್ ಕಳುಹಿಸಿದೆ. ಈ ಮೂಲಕ ದಿಟ್ಟ ಹೆಜ್ಜೆಯನ್ನಿರಿಸಿದೆ ಶ್ರೀಲಂಕಾ..!

ಶ್ರೀಮಂತ ರಾಷ್ಟ್ರಗಳು ತ್ಯಾಜ್ಯವನ್ನು ಬಡ ರಾಷ್ಟ್ರಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದು, ಇತ್ತೀಚೆಗೆ ಏಷ್ಯಾದ ರಾಷ್ಟ್ರಗಳು ಆಮದಾದ ತ್ಯಾಜ್ಯವನ್ನು ವಾಪಸ್ ಕಳುಹಿಸುವ ದಿಟ್ಟತನವನ್ನು ತೋರುತ್ತಿವೆ. ಈ ಸಾಲಿಗೆ ಇದೀಗ ಶ್ರೀಲಂಕಾ ಕೂಡ ಸೇರ್ಪಡೆಯಾಗಿದೆ.
2017ರಿಂದ 2019ರವರೆಗೆ ಬ್ರಿಟನ್ ನಿಂದ 3000 ಟನ್ ನಷ್ಟು ಬಳಸಿದ ವಸ್ತುಗಳು ತುಂಬಿದ ಕಂಟೇನರ್ ತಲುಪಿತ್ತು. 45 ಕಂಟೇನರ್ ಗಳಲ್ಲಿ ಬಳಸಿದ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಈ ರೀತಿ 263 ಕಂಟೇನರ್ ಗಳಲ್ಲಿ ಸುಮಾರು 3000 ಟನ್ ಕಸ ಬಂದಿರುವುದು ಪತ್ತೆಯಾಗಿದೆ. 2020ರಲ್ಲಿ ಇದೇ ರೀತಿ 21 ಕಂಟೇನರ್ ಗಳಲ್ಲಿ ಬಂದಿದ್ದ ವೈದ್ಯಕೀಯ ತ್ಯಾಜ್ಯವನ್ನು ಬ್ರಿಟನ್ ಗೆ ಕಳುಹಿಸಲಾಗಿತ್ತು.


- Advertisement -