- Advertisement -
- Advertisement -
ರಾಮಮಂದಿರದ ಭೂಮಿ ಪೂಜೆ ನೆರವೇರಲು ಈಗಾಗಲೇ ಸಿದ್ಧತೆ ಆರಂಭಗೊಂಡಿವೆ. ನಾಳೆ ಬರೋಬ್ಬರಿ 3 ಗಂಟೆಗಳ ಕಾಲ ಅಯೋದ್ಯೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಇರಲಿದ್ದಾರೆ. ಬೆಳಗ್ಗೆ 9.35ಕ್ಕೆ ದೆಹಲಿಯಿಂದ ಉತ್ತರ ಪ್ರದೇಶಕ್ಕೆ ಆಗಮಿಸುವ ಮೋದಿ ಮಧ್ಯಾಹ್ನ 12.40ಕ್ಕೆ ಮಂದಿರಕ್ಕೆ ಅಡಿಗಲ್ಲು ಹಾಕಲಿದ್ದಾರೆ.
40 ಕೆಜಿ ತೂಕದ ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಿ ಭೂಮಿಯಲ್ಲಿ ನೆಡಲಿದ್ದಾರೆ. ಈಗಾಗಲೇ ಅಭೂತಪೂರ್ವ ಸಮಾರಂಭಕ್ಕೆ ಅಯೋಧ್ಯೆ ಸರ್ವಾಲಂಕಾರಗೊಂಡಿದೆ.ನಾಳೆ ನಡೆಯವ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲದಾಸ್ ಮಾತ್ರ ಇರಲಿದ್ದಾರೆ. ಕಾರ್ಯಕ್ರಮದಲ್ಲಿ 150 ಮಂದಿ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
- Advertisement -