Friday, April 26, 2024
spot_imgspot_img
spot_imgspot_img

ಎಸ್ಸೆಸ್ಸೆಫ್ ಬುಡೋಳಿ ಶಾಖೆಯ ವತಿಯಿಂದ ಮಫಾಝ ಕ್ಯಾಂಪ್

- Advertisement -G L Acharya panikkar
- Advertisement -

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್) ಬುಡೋಳಿ ಶಾಖೆಯ ವತಿಯಿಂದ ಸೆಪ್ಟೆಂಬರ್ 13 ರಂದು ಮಗ್ರಿಬ್ ನಮಾಝ್ ಬಳಿಕ ಬಹುವನ್ಯರಾದ ಹೈದರ್ ಸಖಾಫಿ ಉಸ್ತಾದರ ಮನೆಯಲ್ಲಿ ಮಫಾಝ ಕ್ಯಾಂಪ್ ನಡೆಯಿತು.

ಎಸ್ಸೆಸ್ಸೆಫ್ ಬುಡೋಳಿ ಶಾಖೆಯ ಉಪಾಧ್ಯಕ್ಷರಾದ ಮುಸ್ತಫಾ ರವರ ಸ್ವಾಗತದೊಂದಿಗೆ ಖಿಳ್ರ್ ಜುಮಾ ಮಸೀದಿಯ ಖತೀಬರಾದ ಇಬ್ರಾಹಿಂ ಮದನಿ ಉಸ್ತಾದರು ಉದ್ಘಾಟಿಸಿ ಎಸ್ಸೆಸ್ಸೆಫ್ ಬುಡೋಳಿ ಶಾಖೆ ಸ್ಥಾಪಿಸಿ ಹನ್ನೊಂದು ವರ್ಷದ ಸಂಭ್ರಮವನ್ನು ಮಫಾಝ ಕ್ಯಾಂಪ್ ಮಾಡುವುದರ ಮೂಲಕ ಹನ್ನೂಂದನೆಯ ವಾರ್ಷಿಕ ನಡೆಸಿರುವುದಾಗಿ ತಿಳಿಸಿದರು.ಎಸ್ ವೈ ಎಸ್ ಶೇರ ಬುಡೋಳಿ ಬ್ರಾಂಚ್ ಅಧ್ಯಕ್ಷರಾದ ಹೈದರ್ ಸಖಾಫಿ ಉಸ್ತಾದರು ಶುಭಹಾರೈಸಿದರು.

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಟ್ಯೂಟರ್ ಉಮರುಲ್ ಫಾರೂಕ್ ಹನೀಫಿ ಪರ್ಲೊಟ್ಟು ರವರು ಕಾರ್ಯಕರ್ತರಿಗೆ ಸಂಘಟನಾ ತರಗತಿಯನ್ನು ನಡೆಸಿದರು.ಎಸ್ಸೆಸ್ಸೆಫ್ ಬುಡೋಳಿ ಶಾಖೆಯ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್ ಸಅದಿಯವರು ಅಧ್ಯಕ್ಷೀಯ ಭಾಷಣ ಮಾಡಿದರು,ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಕಲಂದರ್ ಪಾಟ್ರಕೋಡಿಯವರು ಶುಭಹಾರೈಸಿದರು.

ಎಸ್ಸೆಸ್ಸೆಫ್ ಬುಡೋಳಿ ಶಾಖೆಯ ಜೊತೆ ಕಾರ್ಯದರ್ಶಿ ಆಶಿಕ್ ಧನ್ಯವಾದಗೈದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಫ್‌ನ ಟೀ ಶರ್ಟನ್ನು ಕಾರ್ಯಕರ್ತರಿಗೆ ವಿತರಿಸಲಾಯಿತು.ಕೊನೆಯಲ್ಲಿ ದುವಾ ಮಾಡಿ ಮೂರು ಸ್ವಲಾತ್ ನೂಂದಿಗೆ ಕ್ಯಾಂಪ್ ಮುಕ್ತಾಯಗೊಂಡಿತು.

- Advertisement -

Related news

error: Content is protected !!