Monday, July 20, 2026
spot_imgspot_img
spot_imgspot_img

ಏ. 23ರಂದು(ನಾಳೆ) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ

- Advertisement -
- Advertisement -

ಬೆಂಗಳೂರು, ಏ.22: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರ ಫಲಿತಾಂಶವನ್ನು ಏಪ್ರಿಲ್ 23ರಂದು ಮಧ್ಯಾಹ್ನ 12.00 ಗಂಟೆಗೆ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು karresults.nic.in ವೆಬ್‌ಸೈಟ್ ಹಾಗೂ KarnatakaOne Mobile App ಮೂಲಕ ಪರಿಶೀಲಿಸಬಹುದಾಗಿದೆ. ಜೊತೆಗೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಹಾಗೂ ಎಸ್‌ಎಂಎಸ್ ಮೂಲಕ ಫಲಿತಾಂಶದ ಮಾಹಿತಿ ರವಾನಿಸಲಾಗುತ್ತದೆ.

ಈ ವರ್ಷ ಪ್ರಥಮ ಬಾರಿಗೆ, ವಿದ್ಯಾರ್ಥಿಗಳ ಅಂಕಪಟ್ಟಿಯನ್ನು DigiLocker ಮೂಲಕವೂ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಸಂಬಂಧಿತ ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.ಫಲಿತಾಂಶ ಪ್ರಕಟವಾಗುವ ಇದೇ ಸಮಯದಲ್ಲಿ, ಸಂಬಂಧಿತ ಶಾಲೆಗಳಿಗೆ ಸಹ ಫಲಿತಾಂಶದ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

- Advertisement -

Related news

error: Content is protected !!