Monday, June 15, 2026
spot_imgspot_img
spot_imgspot_img

ಕಾಸರಗೋಡು: ಜೀಪು – ಸ್ಕೂಟರ್ ಢಿಕ್ಕಿ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿ ಬಲಿ

- Advertisement -
- Advertisement -

ಕಾಸರಗೋಡು: ಜೀಪು ಹಾಗೂ ಸ್ಕೂಟರ್ ನಡುವೆ ಸಂಭವಿಸಿರುವ ಅಪಘಾತದಲ್ಲಿ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಾಸರಗೋಡಿನ ಪೈವಳಿಕೆಯಲ್ಲಿ ನಡೆದಿದೆ.

ಪೈವಳಿಕೆ ಲಾಲ್ ಬಾಗ್ ನಿವಾಸಿ ಇಫ್ರಾಝ್ ಮೃತಪಟ್ಟ ಬಾಲಕ. ಈತ ಉಪ್ಪಳ ತಹಾನಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಗೆಳೆಯನೊಂದಿಗೆ ಮಸೀದಿಯಿಂದ ಮರಳುತ್ತಿದ್ದಾಗ ಮನೆ ಸಮೀಪವೇ ಈ ಅಪಘಾತ ನಡೆದಿದೆ.

ಮುಂಭಾಗದಲ್ಲಿ ತೆರಳುತ್ತಿದ್ದ ಜೀಪು ತಿರುವೊಂದರಲ್ಲಿ ಏಕಾಏಕಿ ಬ್ರೇಕ್ ಹಾಕಿದೆ. ಆಗ ಹಿಂಭಾಗದಲ್ಲಿ ಬರುತ್ತಿದ್ದ ಸ್ಕೂಟರ್ ಜೀಪಿಗೆ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಪರಿಣಾಮ ಸ್ಕೂಟರ್ ಹಿಂಬದಿ ಸವಾರ ಇಫ್ರಾಝ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದನು. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

- Advertisement -

Related news

error: Content is protected !!