Tuesday, July 21, 2026
spot_imgspot_img
spot_imgspot_img

ವಿಟ್ಲದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ

- Advertisement -
- Advertisement -

ವಿಟ್ಲ(ನ.14): ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವು ದಿನಾಂಕ 15/11/2020 ಭಾನುವಾರದಂದು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ದಲ್ಲಿ ನಡೆಯಲಿದೆ. ಪಂದ್ಯಾಟವು ಬೆಳಿಗ್ಗೆ ಗಂಟೆ 9ಕ್ಕೆ ಆರಂಭವಾಗಲಿದ್ದೂ ಒಟ್ಟು 18 ತಂಡಗಳು ಭಾಗವಹಿಸುತ್ತವೆ .

ಪಂದ್ಯದಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 5000 ರೂ. ಮತ್ತು ಟ್ರೋಫಿ, ದ್ವೀತಿಯ ಬಹುಮಾನವಾಗಿ 3000 ರೂ. ಮತ್ತು ಟ್ರೋಫಿ, ತೃತೀಯ ಬಹುಮಾನವಾಗಿ 2000 ರೂ. ಮತ್ತು ಟ್ರೋಫಿ ಹಾಗೂ ಚತುರ್ಥ ಬಹುಮಾನವಾಗಿ 1000 ರೂ. ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು.

ಪಂದ್ಯಾಟದ ಸಮಾರೋಪ ಸಮಾರಂಭವು ಸಂಜೆ 5 ಗಂಟೆಗೆ ನಡೆಯಲಿದೆ ಹಾಗೂ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಡಾ.ವಿ.ಕೆ ಹೆಗ್ಡೆಯವರನ್ನು ಸನ್ಮಾನಿಸಲಾಗುವುದು ಎಂದು ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!