Tuesday, June 25, 2024
spot_imgspot_img
spot_imgspot_img

ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ. ಬಿಜೆಪಿಯಿಂದ ಕಿಕ್ನೌಟ್ ;ಬಿಜೆಪಿಯಿಂದ ಸಾಮರಸ್ಯಕ್ಕೆ

- Advertisement -G L Acharya panikkar
- Advertisement -

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಫಲಿತಾಂಶಕ್ಕೂ ಮೊದಲೇ ಬಿಜೆಪಿ ಸಂಘಟನೆಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಕರ್ನಾಟಕ ಬಿಜೆಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಗ್ರಾಮದ ರಾಜೇಶ್ ಜಿವಿಯವರಿಗೆ ಕಿಕ್ನೌಟ್ ನೀಡಿರುವುದಾಗಿ ತಿಳಿದು ಬಂದಿದೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕುಂತೂರಿನವರಾದ ರಾಜೇಶ್ ಬಾಲ್ಯದಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜವಾಬ್ದಾರಿ ವಹಿಸಿಕೊಂಡು‌, ತಮ್ಮನ್ನು ತೊಡಗಿಸಿಕೊಂಡವರು ಅನೇಕ ಜಿಲ್ಲೆ, ವಿಭಾಗಗಳಲ್ಲಿ ಹಾಗೂ ಪ್ರಾಂತದ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಣೆ ಮಾಡಿದ್ದು, ನಿನ್ನೆ ಹೆಬ್ರಿಯಲ್ಲಿ ನಡೆಯುತ್ತಿರುವ ಆರ್.ಎಸ್.ಎಸ್. ವರ್ಗದಲ್ಲಿ ಅನೇಕರ ಜವಾಬ್ದಾರಿಗಳು ಬದಲಾವಣೆಯಾಗಿದ್ದು, ಅದರಂತೆ ರಾಜೇಶ್ ಅವರನ್ನು ಬದಲಾವಣೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ರಾಜೇಶ್ ಅವರನ್ನು ಮತ್ತೆ ಮಾತೃ ಸಂಘಟನೆಗೆ ಕರೆಸಿಕೊಂಡಿರುವ RSS ಪ್ರಾಂತ ಸಾಮರಸ್ಯದ ಸಹ ಸಂಯೋಜಕರಾಗಿ‌ ಘೋಷಣೆ ಮಾಡಿದೆ.

- Advertisement -

Related news

error: Content is protected !!