Wednesday, July 2, 2025
spot_imgspot_img
spot_imgspot_img

ಪುತ್ತೂರು: ಮಹಿಳೆಯ ಕಾಲು ಪೈಪ್ ಗೆ ಸಿಲುಕಿ ಒದ್ದಾಟ

- Advertisement -
- Advertisement -

ಪುತ್ತೂರು : ಪುತ್ತೂರಿನ ಮುಖ್ಯರಸ್ತೆ ಬದಿಯಲ್ಲೇ ಇದ್ದಂತಹ ಪೈಪ್ ಒಳಗಡೆ ಬುರ್ಖಾಧಾರಿ ಮಹಿಳೆಯ ಕಾಲು ಸಿಲುಕಿ ಪೈಪ್ ನಿಂದ ಕಾಲು ತೆಗೆಯಲು ಒದ್ದಾಡಿದ್ದ ಘಟನೆ ಸೋಮವಾರ ಸಂಜೆ ನಡೆಯಿತು.ಪುತ್ತೂರು ಪೇಟೆಯ ಹೂವಿನ ಮಾರ್ಕೆಟ್ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಈ ಘಟನೆಯಾಗಿದೆ.ಮುಖ್ಯ ರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್ ಲೈನ್ ಹಾಕಲಾಗಿದ್ದು, ಅಲ್ಲಿದ್ದ ಪೈಪ್ ಲೈನ್ ಕಳೆವು ದಿನಗಳಿಂದ ತುಂಡಾಗಿ ಅಲ್ಲೆ ಬಿದ್ದಿತ್ತು ಎನ್ನಲಾಗಿತ್ತು. ತುಂಡಾಗಿ ಬಿದ್ದಿರುವ ಪೈಪ್ ಲೈನ್‌ಗಳನ್ನು ಗಮನಿಸದ ಅಧಿಕಾರಿಗಳಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಪೈಪ್ ನ ಬಲೆಗೆ ಬೀಳುವವರೆಗೆ ಕಾದು ಕುಳಿತಂತೆ ಇದ್ದರು ಎಂದು ಈ ಘಟನೆಯನ್ನು ನೋಡಿದಾಗ ತಿಳಿಯುತ್ತದೆ ಎನ್ನಲಾಗಿದೆ.ಸ್ಥಳೀಯರು ತಕ್ಷಣವೇ ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ.

- Advertisement -

Related news

error: Content is protected !!