Sunday, June 14, 2026
spot_imgspot_img
spot_imgspot_img

ವಿಟ್ಲ ನಗರ ಬಿಜೆಪಿ 2 ನೇ ವಾರ್ಡ್ ಸಮಿತಿ ವತಿಯಿಂದ , ದ್ವಿತೀಯ ಪಿಯುಸಿಯ ಸ್ನೇಹಾ ಬಿ. ಮತ್ತು ಎಸ್ ಎಸ್ ಎಲ್ ಸಿ ಯ ವಿದ್ಯಾರ್ಥಿನಿ ಶಿವಾನಿ ಜಿ.ಗೆ ಸನ್ಮಾನ.

- Advertisement -
- Advertisement -

ವಿಟ್ಲ:- ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 600ರಲ್ಲಿ 580 ಅಂಕ ಗಳಿಸಿದ ಪುತ್ತೂರಿನ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ಬಿ.ಮತ್ತು
ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ 625ರಲ್ಲಿ 614 ಅಂಕ ಗಳಿಸಿದ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶಿವಾನಿ ಜಿ. ಇವರನ್ನು ವಿಟ್ಲ ನಗರ ಬಿಜೆಪಿ 2 ನೇ ವಾರ್ಡ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸ್ನೇಹಾ ಬಿ. ವಿಟ್ಲ ನಗರದ 2ನೇ ವಾರ್ಡಿನ ಅಧ್ಯಕ್ಷರಾದ ಭೋಜರಾಜ ಮಣಿಯಾಣಿ ಅವರ ಪುತ್ರಿ ಹಾಗೂ ಗಂಗಾಧರ ಅವರ ಪುತ್ರಿ ಶಿವಾನಿ ಜಿ.
ಈ ಸಂದರ್ಭದಲ್ಲಿ ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣ ವಿಟ್ಲ, ವಿಟ್ಲ ನಗರ ಬಿಜೆಪಿ ಕಾರ್ಯದರ್ಶಿ ಜಗದೀಶ್ ಪಾಣೆಮಜಲು, ನಗರ ಯುವಮೋರ್ಚಾ ಅಧ್ಯಕ್ಷ ರಾಜೇಶ್ ಬೊಬ್ಬೆಕೇರಿ, ಪುತ್ತೂರು ಗ್ರಾಮಾಂತರ ಮಂಡಲ ರೈತ ಮೋರ್ಚಾ ಕಾರ್ಯದರ್ಶಿ ಪುನೀತ್ ಮಾಡತ್ತಾರ್, ಬಾಲಗೋಕುಲ ಸಮಿತಿ ಅಧ್ಯಕ್ಷ ಹರೀಶ್ ಸಿಎಚ್, ಪಕ್ಷದ ಹಿರಿಯರಾದ ಅನಂತ ಪ್ರಸಾದ್, ಯುವಕ ಮಂಡಲದ ಜನಾರ್ದನ ಪದ್ಮಶಾಲಿ, ಅಶ್ವಿನ್ ಕಿರಣ್, ವಿದ್ಯಾರ್ಥಿನಿಯ ಹೆತ್ತವರು ಉಪಸ್ಥಿತರಿದ್ದರು.

- Advertisement -

Related news

error: Content is protected !!