Saturday, June 28, 2025
spot_imgspot_img
spot_imgspot_img

ಬಂಟ್ವಾಳ: ಪ್ರಯಾಣಿಕನಿಂದ ವಿದ್ಯಾರ್ಥಿನಿಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ

- Advertisement -
- Advertisement -

ಬಂಟ್ವಾಳ: ಬಂಟ್ವಾಳದ ಅಗ್ರಾರ್ ನಿವಾಸಿ ವಿದ್ಯಾರ್ಥಿನಿ ಬೆಳಿಗ್ಗೆನ ಸಮಯದಲ್ಲಿ ಕಾಲೇಜಿಗೆ ಹೋಗುವ ವೇಳೆ ಬಸ್ ಹತ್ತುವಾಗ ಅಪರಿಚಿತ ಪ್ರಯಾಣಿಕನೊರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಬಿ.ಸಿ.ರೋಡ್‌ನಲ್ಲಿ ನಡೆದಿದೆ.

ಕೆ.ಎಸ್.ಆರ್.ಟಿ‌.ಸಿ ಬಸ್ ಹತ್ತುವ ಸಮಯದಲ್ಲಿ ‌ಹಿಂಬದಿಯಿಂದ ಇದ್ದ ಅಪರಿಚಿತ ವ್ಯಕ್ತಿ ಲೈಂಗಿಕ ‌ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಆತ ವಿದ್ಯಾರ್ಥಿನಿಗೆ ಬೆದರಿಸಿದ್ದಲ್ಲದೆ, ಮುಂದೆಯೇ ಇದೇ ರೀತಿ ಕಿರುಕುಳ ಮಾಡುತ್ತೇನೆ ಏನು ಮಾಡುತ್ತಿ ಎಂದು ಹೆದರಿಸಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ನಿರ್ವಾಹಕನಿಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಪ್ರಯಾಣಿಕ ಹಾಗೂ ನಿರ್ವಾಹಕನ ನಡುವೆ ಮಾತು ಬೆಳೆದಿದೆ ಎನ್ನಲಾಗಿದೆ.ಬಸ್ ನಲ್ಲಿ ನಡೆದ ಘಟನೆ ಬಗ್ಗೆ ಸ್ಥಳದಿಂದಲೇ ವಿದ್ಯಾರ್ಥಿನಿ ಪೋನ್ ಮಾಡಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ.

ಪೋಷಕರು ಮತ್ತು ವಿದ್ಯಾರ್ಥಿನಿ ಕೂಡಲೇ ಪೋಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ನೀಡಿದ ಕೂಡಲೇ ಪ್ರಕರಣ ದಾಖಲಿಸಿಕೊಂಡು, ಕಾರ್ಯಪ್ರವೃತ್ತರಾದ ನಗರ ಠಾಣಾ ಪೋಲೀಸರು ಅಪರಿಚಿತ ಆರೋಪಿಯನ್ನು ಪತ್ತೆ ಹಚ್ಚಿ ಆತನ ಮೇಲೆ ಕಾನೂನು ‌ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

- Advertisement -

Related news

error: Content is protected !!