- Advertisement -
- Advertisement -



ವಸತಿ ಶಾಲೆಯ ಕಾಂಪೌಂಡ್ ಹತ್ತುವ ವೇಳೆ ವಿದ್ಯಾರ್ಥಿನಿ ಜಾರಿ ಬಿದ್ದು ಸಾವನ್ನಪಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಸಿನಿಕ್ಷಾ(16) ಎಂದು ಗುರುತಿಸಲಾಗಿದೆ. ಹರಿಹರದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜ್‌ನಲ್ಲಿ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದ ಶಶಿಕಾಂತ್ ದಂಪತಿಯ ಪುತ್ರಿ ಈಕೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ ವಸತಿ ಶಾಲೆಗೆ ಸೇರಿದ್ದಳು. ಮಂಗಳವಾರ ರಾತ್ರಿ 11:30ರ ವೇಳೆಗೆ ವಸತಿ ಶಾಲೆಯ ಕಾಂಪೌಂಡ್ ಹತ್ತುವ ಸಂದರ್ಭ ಸಿನಿಕ್ಷಾ ಜಾರಿ ಬಿದ್ದಿದ್ದಾಳೆ.
ಘಟನೆಯಿಂದ ತೀವ್ರ ಗಾಯಗೊಂಡಿದ್ದ ಸಿನಿಕ್ಷಾಳನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾಳೆ. ವಿದ್ಯಾರ್ಥಿನಿ ರಾತ್ರಿಯ ವೇಳೆ ಕಾಂಪೌಂಡ್ ಯಾಕೆ ಏರಿದಳು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement -








