Sunday, July 6, 2025
spot_imgspot_img
spot_imgspot_img

ಆನ್‌ಲೈನ್ ಗೇಮ್ ಆಡಬೇಡ ಎಂದು ಹೇಳಿದ್ದಕ್ಕೆ ಯುವಕ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ತುಮಕೂರು: ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ತುಮಕೂರುನಗರದ ಹೊರಪೇಟೆಯಲ್ಲಿ ನಡೆದಿದೆ.ನೇಣಿಗೆ ಶರಣಾದ ಯುವಕನನ್ನು ಟಿ.ಎಸ್.ಭರತ್ (24) ಎಂದು ಗುರುತಿಸಲಾಗಿದೆ.

ಯುವಕ ಇತ್ತೀಚೆಗೆ ಆನ್‌ಲೈನ್ ಗೇಮ್‌ನಲ್ಲಿ 20 ಸಾವಿರ ರೂ. ಹಣ ಕಳೆದುಕೊಂಡಿದ್ದ. ಈ ವಿಚಾರ ಆತನ ತಾಯಿಗೆ ಗೊತ್ತಾಗಿ ಇನ್ನೂ ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿ ಹೇಳಿದ್ದರು. ಇದೇ ವಿಚಾರಕ್ಕೆ ಯುವಕ ತನ್ನ ಮನೆ ಬಳಿಯ ಹಳೆ ಹೆಂಚಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

Related news

error: Content is protected !!