Friday, April 26, 2024
spot_imgspot_img
spot_imgspot_img

ಬಿಜೆಪಿಯ ಪ್ರಬಲ ಕೋಟೆ ಸುಳ್ಯ ಕೇಸರಿ ಪಾಳಯದಲ್ಲಿ ಭಿನ್ನಮತ ಸ್ಫೋಟ – ಮೂವರು ನಾಯಕರನ್ನು ಪಕ್ಷದಿಂದ ಉಚ್ಚಾಟನೆ !

- Advertisement -G L Acharya panikkar
- Advertisement -

ಮಂಗಳೂರು: ಬಿಜೆಪಿಯ ಪ್ರಬಲ ಕೋಟೆ ಎಂದೇ ಪರಿಗಣಿಸಲಾದ ಸುಳ್ಯ ಕೇಸರಿ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಮೂವರನ್ನು ಪಕ್ಷದಿಂದ ಹೊರಹಾಕಲಾಗಿದೆ.

ಇದೀಗ ಪಕ್ಷದಿಂದ ಹೊರಬಿದ್ದಿರುವ ದೇವಚಳ್ಳ ಗ್ರಾಮ ಪಂಚಾಯಿತಿ ಸದಸ್ಯ ಶೈಲೇಶ್ ಅಂಬೆಕಲ್ಲು, ನಲ್ಲೂರು ಕೆಮ್ರಾಜೆ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ತೊಡಿಕಾನ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಈ ಮೂವರು ನಾಯಕರು ಆರೆಸ್ಸೆಸ್ ಮೂಲದವರಾಗಿದ್ದಾರೆ. ಭಿನ್ನಮತ ಎಷ್ಟರ ಮಟ್ಟಿಗೆ ಸ್ಫೋಟಗೊಂಡಿದೆ ಎಂದರೆ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಎನ್. ಮನ್ಮಥ ಅವರನ್ನು ಉಚ್ಚಾಟಿಸುವಂತೆ ಮಂಡಲ ಸಮಿತಿ ಜಿಲ್ಲಾಧ್ಯಕ್ಷರಿಗೆ ಕೋರಿದೆ. ಪ್ರಸ್ತುತ ಬಂದರು ಹಾಗೂ ಮೀನುಗಾರಿಕೆ ಸಚಿವರು ಮತ್ತು ಸ್ಥಳೀಯ ಶಾಸಕರು ಇವೆಲ್ಲ ಘಟನೆಗಳ ಮೂಕ ಪ್ರೇಕ್ಷಕರಾಗಿದ್ದಾರೆ.

- Advertisement -

Related news

error: Content is protected !!