- Advertisement -
- Advertisement -


ಸುಳ್ಯ: ವಿಪರೀತ ಜ್ವರದಿಂದ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಸುಳ್ಯದ ಮಂಡೆಕೋಲು ಎಂಬಲ್ಲಿ ವರದಿಯಾಗಿದೆ.
ಮೃತಪಟ್ಟವರನ್ನು ಸುರೇಶ್ ಕಾಮತ್ ಎಂಬವರ ಪತ್ನಿ ಸುಭಾಷಿಣಿ ಎಂದು ಗುರುತಿಸಲಾಗಿದೆ.
ಸುಳ್ಯದ ಮಂಡೆಕೋಲು ಗ್ರಾಮದ ಶಶಿಧರ ನಾಯಕ್ ಹಾಗೂ ಪದ್ಮಾವತಿ ನಾಯಕ್ ದಂಪತಿಯ ಪುತ್ರಿಯಾಗಿರುವ ಇವರು ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ.. ಇಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ, ಸಹೋದರ, ಸಹೋದರಿ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -