Sunday, June 29, 2025
spot_imgspot_img
spot_imgspot_img

ಸುನಿತಾ ವಿಲಿಯಮ್ಸ್ ಭೂಮಿಗೆ ಮರಳುವುದು ಮುಂದಿನ ವರ್ಷ

- Advertisement -
- Advertisement -

ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ನಾಸಾದ ಗಗನಯಾತ್ರಿ ಸುನಿತ್ ವಿಲಿಯಮ್ಸ್​ ಮುಂದಿನ ವರ್ಷ ಭೂಮಿಗೆ ಮರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್​ ಹಾಗೂ ಬುಚ್ ವಿಲ್ಮೋರ್ ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್ ಲಾಂಚ್ ಕಾಂಪ್ಲೆಕ್ಸ್​41ನಿಂದ ಜೂನ್ 5ರಂದು ಬಾಹ್ಯಾಕಾಶಕ್ಕೆ ಹಾರಿದ್ದರು.

ಒಂದು ವಾರದ ಯೋಜನೆಯಂತೆ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ದೋಷದಿಂದ ಹಿಂತಿರುಗಲು ಸಾಧ್ಯವಾಗದೆ ಇಬ್ಬರು ಅಲ್ಲೇ ಉಳಿದಿದ್ದಾರೆ. ಸದ್ಯ ಅವರಿಬ್ಬರು ಬಾಹ್ಯಾ ಕಾಶಕ್ಕೆ ಹೋಗಿ 2 ತಿಂಗಳುಗಳೇ ಕಳೆದಿವೆ.

ನಾಸಾ ನಿರ್ವಾಹಕ ಬಿಲ್​ ನೆಲ್ಸನ್​​ ಈ ಬಗ್ಗೆ ಮಾತನಾಡಿದ್ದು, ‘ಬಾಹ್ಯಾಕಾಶ ಹಾರಾಟವು ಅಪಾಯಕಾರಿಯಾಗಿದೆ. ಸುನೀತಾ ವಿಲಿಯಮ್ಸ್​ ಅವರನ್ನು ಭೂಮಿಗೆ ಸುರಕ್ಷಿತವಾಗಿ ತರವುದೇ ದೊಡ್ಡ ಫಲಿತಾಂಶವಾಗಿದೆ’ ಎಂದು ಹೇಳಿದ್ದಾರೆ.

- Advertisement -

Related news

error: Content is protected !!