Thursday, May 16, 2024
spot_imgspot_img
spot_imgspot_img

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದ ಪುತ್ತೂರು ಕಂಬಳ ಕೂಟದಲ್ಲಿ ಹಿಂದೂ ನಟಿಯೊಂದಿಗೆ ಅನುಚಿತ ವರ್ತನೆ ತೋರಿಸಿದ ಮುಸ್ಲಿಂ ಪುಂಡ..!

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರು ಕಂಬಳಕ್ಕೆ ವಿಶೇಷ ಸ್ಥಾನಮಾನವಿದ್ದು, ಮಹತೋಭಾರ ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ನಡೆಯುವ ಈ ಕಂಬಳವು ಪುತ್ತೂರಿನ ಜನತೆಗೆ ಜಾತ್ರೋತ್ಸವ ಸಂಭ್ರಮವನ್ನೇ ನೀಡುತ್ತದೆ. 30ನೇ ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಕೂಟದಲ್ಲಿ ಬಿಗ್ ಬಾಸ್ ಸ್ಪರ್ಧಿ ಸಾನಿಯಾ ಅಯ್ಯರ್ ಹಾಗೂ ಆಕೆಯ ಸ್ನೇಹಿತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಿಂದ ಕೆಳಗಿಳಿದು ಹೋಗುತ್ತಿದ್ದ ವೇಳೆ ಅನ್ಯಮತೀಯ ವ್ಯಕ್ತಿಯೋರ್ವ ಸಾನಿಯಾನ ಕೈಹಿಡಿದೆಳೆದ ಘಟನೆ ನಡೆದಿದೆ.

ಶನಿವಾರ ರಾತ್ರಿ ನಡೆದ ಕಂಬಳ ಕೂಟಕ್ಕೆ ಸಾನಿಯಾ ಅತಿಥಿಯಾಗಿ ಆಗಮಿಸಿದ್ದರು. ಪುತ್ತೂರು ಜನರನ್ನು ಪ್ರೀತಿಯಿಂದಲೇ ‘ಐ ಲವ್ ಯೂ ಪುತ್ತೂರು” ಎಂದು ಘೋಷಣೆಯೊಂದಿಗೆ ಮಾತುಗಳನ್ನು ಆಡಿದ್ದರು. ಸಾನಿಯಾ ‘ಐ ಲವ್ ಯೂ ಪುತ್ತೂರು’ ಎಂದು ಭಾಷಣ ಮಾಡುತ್ತಿದ್ದಂತೆಯೇ ಅಲ್ಲಿಯೇ ಕುಳಿತಿದ್ದ ಅಭಿಮಾನಿ ‘ಐ ಲವ್ ಯೂ ಸಾನಿಯಾ” ಎಂದು ಪ್ರತಿಯಾಗಿ ಕೂಗಿದ್ದಾನೆ. ಐದಾರು ಬಾರಿ ಈ ರೀತಿ ಆಗಾಗ್ಗೆ ಹೇಳಿದ್ದಾನೆ. ಸಾನಿಯಾ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಅಭಿಮಾನಿ ಎಂದು ಹತ್ತಿರ ಬಂದಿದ್ದಾನೆ. ತನ್ನೊಂದಿಗೆ ಒಂದಿಷ್ಟು ಪುಂಡರನ್ನು ಕಟ್ಟಿಕೊಂಡು ಬಂದ ಅನ್ಯಮತೀಯ ಯುವಕ ಇಬ್ರಾಹಿಂ ಸೆಲ್ಪಿ ನೆಪದಲ್ಲಿ ಸಾನಿಯಾರ ಕೈ ಹಿಡಿದಿದ್ದಾನೆ ಹಾಗೂ ಸಾನಿಯಾಳ ಸ್ನೇಹಿತೆ ಒಬ್ಬಳನ್ನು ಚುಡಾಯಿಸುವ ಪ್ರಯತ್ನ ಮಾಡಿದ್ದಾನೆ.

ಸಾನಿಯಾ ಕೋಪದಿಂದಲೇ ಸೆಲ್ಫಿ ಕೊಡಲು ನಿರಾಕರಿಸಿದ್ದಾರೆ ಹಾಗೂ ಸ್ವಲ್ಪ ಸಮಯದ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆಯಿಂದ ತೀವ್ರವಾಗಿ ನೊಂದಿರುವ ನಟಿ ಹಾಗೂ ಆಕೆಯ ಸ್ನೇಹಿತೆಯರು ಸ್ವಾರಿ ಕೇಳುವಂತೆ ಆಗ್ರಹಿಸಿದರು. ಅಷ್ಟರಲ್ಲಿ ಇಬ್ರಾಹಿಂ ಈ ನಡೆ ಅಲ್ಲಿದ್ದವರಿಗೆ ಕೋಪ ತರಿಸಿದೆ. ಅಲ್ಲದೇ ಇಬ್ರಾಹಿಂ ನಶೆಯಲ್ಲಿ ಇದೆ ಎಂದು ತಿಳಿಯುತ್ತಿದ್ದಂತೆಯೇ ಅಲ್ಲಿದ್ದವರು ಅವನಿಗೆ ಧರ್ಮದೇಟು ನೀಡಿ, ಕಂಬಳದಿಂದಲೇ ಅವನನ್ನು ಆಚೆ ಕಳುಹಿಸಿದ್ದಾರೆ ಎಂದು ಸ್ಥಳೀಯ ಮಹಿಳೆಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪೊಲೀಸರಿಗೆ ಯಾರೂ ಮಾಹಿತಿ ನೀಡಿಲ್ಲ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ದಿ. ಜಯಂತ್‌ ರೈ ಮತ್ತು ದಿ. ಮುತ್ತಪ್ಪ ರೈ ಇವರ ಸಾರಥ್ಯದಲ್ಲಿ ನಡೆಯುತ್ತಿದ್ದ ಕಂಬಳದಲ್ಲಿ ಇದುವರೆಗೂ ಒಂದು ಕಪ್ಪು ಚುಕ್ಕೆ ಬಂದಿರಲಿಲ್ಲ. ಆದರೆ ಇದೀಗ ಕಂಬಳ ಸಮಿತಿಯಲ್ಲಿ ಕೆಲವು ವರ್ಷಗಳಿಂದ ಒಳಜಗಳ ಉಂಟಾಗಿದ್ದು ,ಕಂಬಳ ಸಮಿತಿಯಲ್ಲಿದ್ದ ತಂಡಗಳು ಕಂಬಳ ಸಮಿತಿಯಿಂದ ಹೊರಗುಳಿದಿದ್ದಾರೆ. ಹೀಗಿರುವ ಕಂಬಳ ಸಮಿತಿಯ ಆಡಳಿತ ವೈಫಲ್ಯವೇ ಇಂತಹ ವ್ಯವಸ್ಥೆಗೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ದಿ. ಮುತ್ತಪ್ಪ ರೈ ನೇತೃತ್ವದಲ್ಲಿ ನಡೆಯುತ್ತಿದ್ದ ಕಂಬಳದಲ್ಲಿ ಬೆಂಗಳೂರಿನಿಂದ ಸಾವಿರಾರೂ ಮಂದಿ ಬಂದು ಕಂಬಳದ ಮೆರುಗನ್ನು ನೋಡಿ ಸಂಭ್ರಮಿಸುತ್ತಿದ್ದರು ಮತ್ತು ಅನೇಕ ತಾರೆಯರು, ಸಿನಿಮಾ ನಟಿಯರು, ರಾಜಕೀಯ ಮುಖಂಡರು ಬಂದು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ವಿಶೇಷತೆಯೇ ಬೇರೆ. ಹಿಂದೂಗಳ ಪವಿತ್ರ ಭೂಮಿಯಾದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಮುಸ್ಲಿಂ ಯುವಕನಿಂದ ಕಂಬಳಕ್ಕೆ ಬಂದಂತಹ ಅತಿಥಿಗೆ ಇಂಥ ಕೃತ್ಯ ಎಸಗಿದ್ದು ಹೀನಾಯಕರ ಎಂದು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.

ಇನ್ನೂ ಬೇರೆ ತಾರೆಯರು ಅಥವಾ ಚಿತ್ರ ನಟರು ಪುತ್ತೂರಿಗೆ ಬರಲು ಹಿಂದೆ ಮುಂದೆ ನೋಡುತ್ತಿರುವ ಪ್ರಸಂಗ ಇನ್ನು ಎದುರಿಸಬೇಕಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ.

- Advertisement -

Related news

error: Content is protected !!