Friday, May 10, 2024
spot_imgspot_img
spot_imgspot_img

ಕಾಸರಗೋಡಿನಲ್ಲಿ ಮಾದಕ ತಾರೆ ಸನ್ನಿ ಲಿಯೋನ್

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg
This image has an empty alt attribute; its file name is VC_PUC_-1-819x1024.jpg

ಕಾಸರಗೋಡು : ಮಾಜಿ ನೀಲಿಚಿತ್ರ ನಟಿ ಸನ್ನಿ ಲಿಯೋನ್ ಕಾಸರಗೋಡಿನಲ್ಲಿ ಬೀಡು ಬಿಟ್ಟಿದ್ದಾರೆ. ಕಾಸರಗೋಡಿನ ಸೀತಂಗೋಳಿ ಸಮೀಪದ ಶೇಣಿಯಲ್ಲಿ ಸಿನಿಮಾ ಸನ್ನಿ ಲಿಯೋನ್ ಅವರ ಹಿಂದಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ಅದರಲ್ಲಿ ಭಾಗಿಯಾಗಿದ್ದಾರೆ.

ನಟಿ ಕಾಸರಗೋಡಿನ ಶೇಣಿ ಎಂಬಲ್ಲಿ ಒಬ್ಬ ಆಟೋ ಡ್ರೈವರ್ ಬಳಿ ಬಂದು ಸ್ವಲ್ಪ ಹೊತ್ತು ಮಾತನಾಡಿ ಅಲ್ಲಿಂದ ಹೊರಟು ಹೋಗುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗುತ್ತಿದೆ. ಹೊಸ ಚಿತ್ರದ ಶೂಟಿಂಗ್‌ಗೆ ಸಂಬಂಧಿಸಿದಂತೆ ನಟಿ ಕಾಸರಗೋಡಿನಲ್ಲಿ ಕಳೆದ ಕೆಲವು ದಿನಗಳಿಂದ ಇದ್ದಾರೆ ಎನ್ನಲಾಗಿದೆ. ನಟಿ ಈ ಹಿಂದೆ ಹಲವು ಸಲ ಶೂಟಿಂಗ್ ಭಾಗವಾಗಿ ಕೇರಳಕ್ಕೆ ಬಂದಿದ್ದಾರೆ.

ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಹಾಟ್ ತಾರೆ ಸನ್ನಿಯ ಮಾದಕ ನೋಟವನ್ನ ನೋಡಲು ರಸ್ತೆ ಬದಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ ಎನ್ನಲಾಗಿದೆ. ಕಾಸರಗೋಡಿನ ಈ ಶೇಣಿ ಎಂಬ ಸುಂದರ ಪ್ರದೇಶ ಸಿನಿಮಾ ಚಿತ್ರೀಕರಣಕ್ಕೆ ಹೆಸರುವಾಸಿಯಾಗಿದ್ದು ಹಲವಾರು ಪರಭಾಷಾ ಚಲನಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿದೆ

- Advertisement -

Related news

error: Content is protected !!