Wednesday, July 22, 2026
spot_imgspot_img
spot_imgspot_img

ಇರಾನ್ ದಾಳಿಗೆ ರಷ್ಯಾ ಬೆಂಬಲ? -ಜರ್ಮನಿ ಗಂಭೀರ ಆರೋಪ

- Advertisement -
- Advertisement -

ಪ್ಯಾರಿಸ್‌: ದಾಳಿಯ ಗುರಿಗಳನ್ನು ಗುರುತಿಸಲು ಇರಾನ್ ಗೆ ರಶ್ಯ ಸಹಾಯ ಮಾಡುತ್ತಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವ ಜೊಹಾನ್ ವಾಡ್ ಫಾಲ್ ಶುಕ್ರವಾರ ಆರೋಪಿಸಿದ್ದಾರೆ.ಇರಾನ್ ಯುದ್ಧವನ್ನು ಬಳಸಿಕೊಂಡು, ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ರಶ್ಯ ಅಧ್ಯಕ್ಷ ವ್ಯಾದಿಮಿರ್ ಪುಟಿನ್ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ-7 ಸಭೆಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಧ್ಯಪ್ರಾಚ್ಯದ ಉದ್ವಿಗ್ನತೆ ಅಂತ್ಯಗೊಂಡ ನಂತರ ಹಾರ್ಮುಝ್ ಜಲಸಂಧಿಯ ವಿಚಾರದಲ್ಲಿ ಪಾತ್ರವಹಿಸುವ ಕುರಿತು ಜರ್ಮನಿಯ ನಿಲುವಿನ ರೂಪುರೇಷೆಯನ್ನು ಅಂತಿಮಗೊಳಿಸಲು ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.”ಪುಟಿನ್ ಅವರು ಉಕ್ರೇನ್ ಮೇಲಿನ ತಮ್ಮ ದಾಳಿಯಿಂದ ಗಮನವನ್ನು ಮಧ್ಯಪ್ರಾಚ್ಯದ ಉದ್ವಿಗ್ನತೆ ಕಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ.”

ಈ ಲೆಕ್ಕಾಚಾರ ಯಶಸ್ವಿಯಾಗುವುದಿಲ್ಲ. ಈ ಎರಡು ಬಿಕ್ಕಟ್ಟುಗಳು ಪರಸ್ಪರ ನಿಕಟವಾಗಿ ಸಂಬಂಧ ಹೊಂದಿರುವುದನ್ನು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ. ಮಹತ್ವದ ಗುರಿಗಳ ಕುರಿತು ರಶ್ಯ ಇರಾನ್ ಗೆ ಮಾಹಿತಿ ನೀಡುತ್ತಿರುವುದು ಸಾಬೀತಾಗಿದೆ,” ಎಂದು ಅವರು ಹೇಳಿದ್ದಾರೆ.

- Advertisement -

Related news

error: Content is protected !!