Saturday, June 28, 2025
spot_imgspot_img
spot_imgspot_img

ಸುರತ್ಕಲ್: ಬಸ್‌ ಚಾಲಕನ ದಿಡೀರ್‌ ಬ್ರೇಕ್‌ಗೆ ಬಸ್‌ನಿಂದ ಬಿದ್ದು ಮಹಿಳೆ ಮೃತ್ಯು…..!

- Advertisement -
- Advertisement -

ಸುರತ್ಕಲ್: ಖಾಸಗಿ ಬಸ್‌ ಚಾಲಕ ದಿಡೀರ್‌ ಬ್ರೇಕ್‌ ಹಾಕಿದ ಪರಿಣಾಮ ಬಸ್‌ ಮುಂಭಾಗದಲ್ಲಿ ಕುಳಿತ ಮಹಿಳೆ ಕೆಳಗೆ ಬಿದ್ದು ತಲೆ ಮೇಲೆ ಚಕ್ರ ಹರಿದು ಮಹಿಳೆ ಸಾವನ್ನಪ್ಪಿದ್ದ ಘಟನೆ ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ಬಳಿ ನಡೆದಿದೆ.

ಮೃತಪಟ್ಟ ಮಹಿಳೆ ಈರಮ್ಮ (65) ಎಂದು ಗುರುತಿಸಲಾಗಿದೆ. ತನ್ನ ಮಗಳೊಂದಿಗೆ ಖಾಸಗಿ ಬಸ್ಸಿನಲ್ಲಿ ಸುರತ್ಕಲ್‌ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬಸ್ಸು ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ತಲುಪಿದಾಗ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ.

ಮುಂದಿನ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್‌ನಿಂದ ಕೆಳಗೆ ಬಿದ್ದಿದ್ದಾರೆ. ಅಲ್ಲದೇ ಬಸ್ಸಿನ ಹಿಂದಿನ ಎಡ ಚಕ್ರ ಈರಮ್ಮನ ಮಹಿಳೆ ಮೇಲೆ ಚಲಿಸಿದೆ. ಇದರ ಪರಿಣಾಮವಾಗಿ ತಲೆಗೆ ಬಲವಾದ ಪೆಟ್ಟಾಗಿದ್ದು ಈರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!