Thursday, May 2, 2024
spot_imgspot_img
spot_imgspot_img

ಮಂಗಳೂರು: Sweet Symphony Institute of Music ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ ನುಡಿಸುವುದಕ್ಕೆ ನೆರವಾಗುವ ಸಂಪುಟ 2′ ರ ನೂತನ ಕೃತಿ ಕಳೆದ ವಾರ ಮಂಗಳೂರಿನಲ್ಲಿ ಲೋಕಾರ್ಪಣಗೊಂಡಿತು.


ಉದ್ಯಮಿ, ಸಮಾಜಸೇವಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ ಶ್ರೀಮತಿ ಬೆನೆಟ್ ನವಿತಾ ಕ್ರಾಸ್ತ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, “ಸಂಗೀತ ಶಿಕ್ಷಕ ಹಾಗು ರಂಗ ಕಲಾವಿದ ವಿಜಯ್ ನೊರೊನ್ಹ ಅವರ ಹಲವು ದಶಕಗಳ ಅಧ್ಯಾಪನ‌ದ ಅನುಭವ ಮತ್ತು ವಾದನರಂಗದ ಪರಿಶ್ರಮ ಪಾಂಡಿತ್ಯಗಳು ಈ ಕೃತಿಯ ಪ್ರತಿ ಪುಟವನ್ನೂ ಸಮೃದ್ಧಗೊಳಿಸಿವೆ; ಸಂಗೀತ ಕಲಿಕಾರ್ಥಿಗಳ ಕೈಬೆರಳು ಹಿಡಿದು ಮುನ್ನಡೆಸುವ ಸ್ಪಷ್ಟ ಸೂಚನೆಗಳು ಮತ್ತು ಉತ್ತಮ ಮಾರ್ಗದರ್ಶನ ವನ್ನು ಕೃತಿಯು ಒದಗಿಸುತ್ತದೆ” ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿದ್ದ ಸಂಗೀತಗಾರ ಹಾಗೂ ಶಾಲೋಮ್ ರೆಕಾರ್ಡಿಂಗ್ ಸ್ಟುಡಿಯೋ ಮಾಲಿಕರಾದ ಡಿಜೆ ರಾಕೇಶ್ ಜೋಸೆಫ್ ಡಿಸೋಜ ಅವರು ” ಸ್ವೀಟ್ ಸಿಂಫನಿ ಸಂಸ್ಥೆಯ ಮಾಲಕರೂ ಉತ್ತಮ ಸಂಗೀತಗಾರರೂ ಆಗಿರುವ ಕೃತಿಕಾರ ವಿಜಯ್ ನೊರೊನ್ಹ ಅವರು ಎಲ್ಲ ಹಂತದ ಸಂಗೀತಾರ್ಥಿಗಳು ತಮ್ಮ ಮೆಚ್ಚಿನ ರಾಗಗಳಲ್ಲಿ ಪ್ರಭುತ್ವ ಸಾಧಿಸಲು ಅವಶ್ಯವಿರುವ ಕೌಶಲ್ಯ ಮತ್ತು ತಂತ್ರಗಳನ್ನು ಈ ಕೃತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಸಾರ್ವಕಾಲಿಕ ಜನಪ್ರಿಯತೆಯ ಮಧುರ ಗೀತೆಗಳಿಂದ ಸಮಕಾಲೀನ ಸೂಪರ್ ಹಿಟ್ ಗೀತೆಗಳವರೆಗೆ, ಬೇರೆ ಬೇರೆ ತಲೆಮಾರಿನ, ಬೇರೆ ಬೇರೆ ಭಾಷೆಯ ವೈವಿಧ್ಯಮಯ ಹಾಡುಗಳ ಪಾಶ್ಚಿಮಾತ್ಯ ನೊಟೇಶನ್ ಗಳನ್ನು ಒದಗಿಸುವ ಮೂಲಕ ಉದಯೋನ್ಮುಖ ಸಂಗೀತಗಾರರಿಗೆ ಈ ಕ್ರತಿಯು ಬಹು ಉಪಯುಕ್ತವಾಗಿದೆ” ಎಂದರು.

ಶ್ರೀ ಜಯರಾಜ್ ರೇಗೊ ಅತಿಥಿಗಳನ್ನು ಸ್ವಾಗತಿಸಿ, ಕೃತಿಯನ್ನು ಪರಿಚಯಿಸಿದರು. ಸ್ವೀಟ್ ಸಿಂಫನಿ ಸಂಸ್ಥೆಯ ಮಾಲಕರಾದ ವಿಜಯ್ ನೊರೊನ್ಹರವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

- Advertisement -

Related news

error: Content is protected !!