Wednesday, July 2, 2025
spot_imgspot_img
spot_imgspot_img

ಜಿಲ್ಲಾ ಮಟ್ಟದ ಈಜು ಸ್ಪರ್ಧೆ- ಪುತ್ತೂರು ಸಂತ ಫಿಲೋಮಿನಾ ಪಿಯು ವಿದ್ಯಾರ್ಥಿನಿಯರ ತಂಡ ಚಾಂಪಿಯನ್ ಶಿಪ್

- Advertisement -
- Advertisement -

ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ ಈಜು ಸ್ಪರ್ಧೆಯು ಡಾ. ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ನಡೆದು, ಪುತ್ತೂರು ಸಂತ ಫಿಲೋಮಿನಾ ಪಿಯು ವಿದ್ಯಾರ್ಥಿನಿಯರ ತಂಡವು ಚಾಂಪಿಯನ್ ಶಿಪ್ ಗಳಿಸಿಕೊಂಡಿತು.

ಧನ್ವಿ ಜೆ ರೈಯವರು100 ಮೀ. ಫ್ರೀಸ್ಟೈಲ್ ನಲ್ಲಿ ಚಿನ್ನ, 200 ಮೀ ಐಎಮ್ ನಲ್ಲಿ ಚಿನ್ನ ಹಾಗೂ 100 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

4×100 ಮೀ ಫ್ರೀಸ್ಟೈಲ್ ಮತ್ತು 4×100 ಮೀ ಮೆಡ್ಲೆ ರಿಲೇಗಳಲ್ಲಿ ವಾಸವಿ ಬಿ‌ ರೈ, ಅನನ್ಯ ಕೆ, ಶಾಂತೇರಿ ಶೆಣೈ ಇವರನ್ನೊಳಗೊಂಡ ಧನ್ವಿ ಜೆ ರೈಯವರ ರಿಲೇ ತಂಡವು ಎರಡು ಚಿನ್ನದ ಪದಕಗಳನ್ನು ಪಡೆದು ಚಾಂಪಿಯನ್ ಗಳಿಸಿಕೊಂಡಿತು.

- Advertisement -

Related news

error: Content is protected !!