Saturday, June 28, 2025
spot_imgspot_img
spot_imgspot_img

ಗ್ರಾ.ಪಂ ಚುನಾವಣೆ : ಪತ್ನಿಯ ಆಯ್ಕೆಗೆ 25 ಲಕ್ಷ ರೂ. ಕೊಡಲು ಮುಂದಾದ ತಹಶೀಲ್ದಾರ್

- Advertisement -
- Advertisement -

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ತಹಶೀಲ್ದಾರ್‌ ಒಬ್ಬರು ತಮ್ಮ ಪತ್ನಿಯ ಅವಿರೋಧ ಆಯ್ಕೆಗಾಗಿ ₹ 25 ಲಕ್ಷ ನೀಡಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ ಭಾನುವಾರ ಮನೆಗೊಬ್ಬರಂತೆ ಸಭೆ ಸೇರಿ ತಹಶೀಲ್ದಾರ್‌ ಪತ್ನಿಯ ಆಯ್ಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಗ್ರಾಮದಲ್ಲಿ ದೇವಾಲಯ ನಿರ್ಮಾಣಕ್ಕೆ ₹ 25 ಲಕ್ಷ ಹಾಗೂ ಗ್ರಾಮದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಹಣಕಾಸಿನ ಸಹಾಯ ಮಾಡಲು ತಹಶೀಲ್ದಾರ್‌ ಭರವಸೆ ನೀಡಿದ್ದಾರೆ.

ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಇತರ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ಈಗ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಹಶೀಲ್ದಾರ್‌ ಕೂಡ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚು ಸರ್ಕಾರಿ ಸೌಲಭ್ಯಗಳು ಲಭಿಸಿ ಗ್ರಾಮ ಅಭಿವೃದ್ಧಿ ಹೊಂದುತ್ತದೆ. ಅವರ ಪತ್ನಿಯನ್ನು ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲೂ ಮಾತುಕತೆಯಾಗಿದೆ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

- Advertisement -

Related news

error: Content is protected !!