Tuesday, May 14, 2024
spot_imgspot_img
spot_imgspot_img

ನೀಲಿ ಕ್ರಾಂತಿಗೆ ತಮಿಳುನಾಡು ತಕ್ಕನಾದ ರಾಜ್ಯ- ಶಾ

- Advertisement -G L Acharya panikkar
- Advertisement -

ಚೆನ್ನೈ: ತಮಿಳುನಾಡಿಗೆ ಭೇಟಿ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಹಲವು ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಮಿಳುನಾಡು ಅಭಿವೃದ್ಧಿಗೆ ಕಟಿಬದ್ಧವಾಗಿದೆ ಎಂದರು.ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದೆ.

ಈ ವರ್ಷ ಉತ್ತಮ ಆಡಳಿತದ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿರುವುದು ನನಗೆ ಸಂತೋಷವಾಗಿದೆ.ತಮಿಳುನಾಡಿನ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಕಟಿಬದ್ಧರಾಗಿದ್ದಾರೆ. 70,000 ಕೋಟಿ ರೂಪಾಯಿ ವೆಚ್ಚದ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಲಾಗಿದೆ. ತಮಿಳುನಾಡಿನ ನಾಲ್ಕೂ ದಿಕ್ಕುಗಳ ಶೀಘ್ರ ಅಭಿವೃದ್ಧಿಗಾಗಿ ಈ ಯೋಜನೆಗಳನ್ನು ರೂಪಿಸಲಾಗಿದೆ.

ತಮಿಳುನಾಡು ಸರ್ಕಾರ ನವಜಾತ ಶಿಶುಗಳು ಹಾಗೂ ಗರ್ಭಿಣಿಯರ ಆರೈಕೆಯನ್ನ ಅತ್ಯುತ್ತಮವಾಗಿ ಮಾಡಿಕೊಂಡು ಬಂದಿದೆ. ಹಲವು ವರ್ಷಗಳಿಂದ ಕಟ್ಟಿಡಲಾಗಿದ್ದ ಹಲವು ಕೃಷಿ ಮಸೂದೆಗಳನ್ನ ಪ್ರಧಾನಿಮೋದಿ ಜಾರಿಗೆ ತಂದಿದ್ದಾರೆ. ಈ ಕೃಷಿ ಮಸೂದೆಗಳಿಂದ ತಮಿಳುನಾಡು ರೈತರೂ ಸಹ ಫಲಾನುಭವಿಗಳಾಗಲಿದ್ದಾರೆ.

ತಮಿಳುನಾಡು ನೀಲಿ ಕ್ರಾಂತಿಗೆ ತಕ್ಕನಾದ ರಾಜ್ಯವಾಗಿದೆ. ಮೋದಿ ಸರ್ಕಾರ ಹೊಸದಾಗಿ ಮೀನುಗಾರಿಕೆ ಇಲಾಖೆಯನ್ನು ರೂಪಿಸಿದೆ, ಆ ಮೂಲಕ ನೀಲಿ ಕ್ರಾಂತಿಗಾಗಿ 20,000 ಕೋಟಿರೂಪಾಯಿಗಳನ್ನು ನೀಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

- Advertisement -

Related news

error: Content is protected !!