Saturday, June 28, 2025
spot_imgspot_img
spot_imgspot_img

ತಗೋ ನಿನ್ನ ಲವ್ವರ್ ತಲೆ ಕಡಿದು ತಂದಿದ್ದೇನೆ ; ಪತ್ನಿ ಮನೆ ಮುಂದೆ ರುಂಡ ಎಸೆದ ಪತಿ..!

- Advertisement -
- Advertisement -
vtv vitla

ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ವ್ಯಕ್ತಿಯೋರ್ವ ಆಕೆಯ ಪ್ರಿಯಕರನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಆರೋಪಿಯನ್ನು ಎಸ್ ವೇಲುಸಾಮಿ ಎಂದು ಗುರುತಿಸಲಾಗಿದೆ. ಡಿ ಮುರುಗನ್ ಕೊಲೆಯಾದಾತ. ಇವರಿಬ್ಬರು ತೆಂಕಾಸಿ ಜಿಲ್ಲೆಯ ಕನ್ನಡಿಕುಲಂ ಗ್ರಾಮದ ನಿವಾಸಿಗಳು.

ವೇಲುಸಾಮಿ ಪತ್ನಿಗೆ ಮುರುಗನ್ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಚಾರ ವೆಲುಸಾಮಿ ಗಮನಕ್ಕೆ ಬಂದ್ದು, ಪತ್ನಿಗೆ ಎಚ್ಚರಿಕೆ ನೀಡಿದ್ದನು. ಆದರೆ ಪತಿಯ ಮಾತನ್ನು ಪತ್ನಿ ಕೇಳದೇ ಮುರುಗನ್ ಜೊತೆ ತನ್ನ ಸಂಬಂಧ ಮುಂದುವರಿಸಿದ್ದಳು. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.

ಪದೇ ಪದೇ ಜಗಳವಾಗುತ್ತಿದ್ದರಿಂದ ಪತಿ ಮೇಲೆ ಸಿಟ್ಟುಮಾಡಿಕೊಂಡು ಪತ್ನಿ ತವರು ಮನೆ ಸೇರಿದ್ದಳು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ವೆಲುಸಾಮಿ, ಮುರುಗನ್ ಜೊತೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಮುರುಗನ್‍ನನ್ನು ವೆಲುಸಾಮಿ ರುಂಡ-ಮುಂಡ ಬೇರೆ ಬೇರೆ ಮಾಡಿದ್ದಾನೆ. ನಂತರ ಮುರುಗನ್ ರುಂಡದೊಂದಿಗೆ ಪತ್ನಿ ಮನೆಗೆ ತೆರಳಿದ್ದಾನೆ.

ಪತ್ನಿ ಮನೆಗೆ ಹೋಗಿ, ತಗೋ ನಿನ್ನ ಲವ್ವರ್ ತಲೆ ಕಡಿದು ತಂದಿದ್ದೇನೆ ಎಂದು ಸಿಟ್ಟಿನಿಂದ ಕಿರುಚಾಡಿದ್ದಾನೆ. ಇತ್ತ ತನ್ನ ಲವ್ವರ್ ತಲೆ ಕಂಡು ಆಕೆ ಗಾಬರಿಯಿಂದ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಕೂಡಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ವೆಲುಸಾಮಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.ಇತ್ತ ಮುರುಗನ್ ತಲೆಯನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನು ವೆಲುಸಾಮಿಯನ್ನು ಪ್ರಕರಣ ಸಂಬಂಧ ವಿಚಾರಣೆ ನಡೆಸಿದಾಗ ಆತ ಪತ್ನಿಯ ಅಕ್ರಮ ಸಂಬಂಧದ ಕುರಿತು ವಿವರಿಸಿದ್ದಾನೆ.

- Advertisement -

Related news

error: Content is protected !!