Wednesday, December 11, 2024
spot_imgspot_img
spot_imgspot_img

ನಿರಪೇಕ್ಷಿತ ಶಿಕ್ಷಕರ ಕ್ಷಣದ ತುಡಿತ.-ಮುಕ್ತಶ್ರೀ ವಿಟ್ಲ.

- Advertisement -
- Advertisement -

ವಿಟ್ಲ : ಕೊರೊನ ಭೀತಿ ಜಗತ್ತಿನ ಎಲ್ಲ ಕ್ಷೇತ್ರಗಳಿಗೆ ಬಿಸಿ ತಟ್ಟಿಸುತ್ತಿದೆ. ಶೈಕ್ಷಣಿಕ ಕ್ಷೇತ್ರವಂತೂ ತಡೆಯಲಾಗದೆ ತತ್ತರಿಸುತ್ತಿದೆ. ಮನೆ ಮಕ್ಕಳಿಂದ ಮಂತ್ರಿವರೇಣ್ಯರವರೆಗೂ ದಿನಕ್ಕೊಂದು ಯೋಜನೆಗಳನ್ನು ಹಾಕುತ್ತ ಇರಿಸುಮುರಿಸು ಮಾಡಿದೆ. ಖಾಸಗಿ ಶಾಲಾಕಾಲೇಜು ಶಿಕ್ಷಕರು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎನ್ನುವಂತೆ ದುಡಿಮೆಯ ಕ್ಷೇತ್ರವನ್ನು ಬದಲಿಸುವ ಹಾದಿ ಹಿಡಿದಿದ್ದಾರೆ. ಕಳೆದವರ್ಷಗಳ ಲಕ್ಷಗಟ್ಟಲೆ ಶುಲ್ಕ ಪಾವತಿಸಿಕೊಳ್ಳಲಾಗದೆ ಪ್ರಸಕ್ತ ವರ್ಷಗಳ ರೂಪುರೇಷೆಗಳಿಲ್ಲದೆ ಆಡಳಿತ ಮಂಡಳಿ ತಮ್ಮ ಉತ್ತಮ ಶಿಕ್ಷಕರ ಉಳಿಸಿಕೊಳ್ಳುವಿಕೆಗೆ ನಿದ್ದೆಕೆಡಿಸಿಕೊಳ್ಳುತ್ತ ಚಡಪಡಿಸುತ್ತಿದೆ. ಕೆಲವು ಪೋಷಕರು ತಮ್ಮ ಮಕ್ಕಳ ಕಳೆದ ವರ್ಷದ ಶಿಕ್ಷಣದ ಬಿಡಿಕಾಸು ನೀಡದೆ ನಿರ್ಲಿಪ್ತರಾಗಿ ದಿನ ಕಳೆಯುತಿದ್ದು, ಈ ವರ್ಷದ ಶುಲ್ಕ ವಿನಾಯಿತಿಯ ದಾರಿ ನೋಡುತ್ತಿದ್ದಾರೆ.

ಈ ಎಲ್ಲಾ ಸಮಸ್ಯೆಗಳ ನಡುವೆ ವಿಟ್ಲದ ಖಾಸಗಿ ಶಿಕ್ಷಣ ಸಂಸ್ಥೆಯೊಂದು ತಮ್ಮ ಮಕ್ಕಳ ಶಿಕ್ಷಣದ ಕಾಳಜಿಯನ್ನು ತಮಗೆ ಸಾದ್ಯವಾದ ಪ್ರಯತ್ನದ ಮೂಲಕ ಮಾಡುತ್ತಿದೆ. ಸರಕಾರ ಇತ್ತೀಚೆಗೆ ಮಾಡುತ್ತಿರುವ ಯೋಜನೆಯಂತೆ ಏಪ್ರಿಲ್ ತಿಂಗಳಿಂದಲೇ ತಮ್ಮ ಶಿಕ್ಷಕರ ಹಾಗೂ ಹೊಸ ತಂತ್ರಗಾರಿಕೆಗಳನ್ನೊಳಗೊಂಡು ತರಗತಿವಾರು ವಿಷಯಗಳ ಬೋಧನೆಯನ್ನು ದಾಖಲೀಕರಣ ಮಾಡಿ ಬೋಧನಾ ಮಾಧ್ಯಮಗಳ ಮೂಲಕ ಯಾವುದೇ ವೇಳೆಯಲ್ಲಿ ಮನೆಯಲ್ಲೇ ತರಗತಿ ಪಡೆಯುವ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಸದ್ರಿ ತರಗತಿಗಳ ಪರಾಮರ್ಶೆಗಾಗಿ ಇದೀಗ ಪಠ್ಯ ಪುಸ್ತಕ ಹಾಗೂ ಬರೆಯುವ ಪುಸ್ತಕಗಳು ವಿದ್ಯಾರ್ಥಿಗಳ ಮನೆಯ ಬಳಿ ತಲುಪಿಸುವ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪ್ರಯತ್ನ ಹೆತ್ತವರಿಗೆ ಕನಿಕರ ಹುಟ್ಟಿಸಿದೆ. ಶಿಕ್ಷಕರ ವೇತನ ಏಪ್ರಿಲ್ ತಿಂಗಳಿಂದಲೇ ಕಡಿತವಿದ್ದರೂ ವಿದ್ಯಾರ್ಥಿಗಳ ಏಳಿಗೆಯಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಿರಪೇಕ್ಷಿತ ದುಡಿಮೆಯಿದೆ ಎಂಬ ಕಂಕಣಬದ್ಧತೆಗೆ ಕೆಲವು ಪೋಷಕರ ಮಿಡಿತವು ” ನಮ್ಮ ಸಂಸ್ಥೆಗೆ ಆರ್ಥಿಕ ಬೆಂಬಲ ನೀಡುತ್ತೇವೆಂದು” ನನ್ನಂತೆ ಶುಲ್ಕದ ಮೊದಲ ಕಂತನ್ನು ನೀಡುವುದಕ್ಕೆ ಮುಂದಾಗಿರುವುದು ಪ್ರತ್ಯಕ್ಷ ಸಾಕ್ಷಿಯಾಗಿದೆ.

ಹಾಗೆಂದು ಕಳೆದ ವರ್ಷವೂ ಶುಲ್ಕ ಪಾವತಿಸಲಾಗದೆ, ಈ ವರ್ಷವೂ ಹದಗೆಟ್ಟ ಆರ್ಥಿಕ ಸ್ಥಿತಿಯಲ್ಲಿ ಶುಲ್ಕ ನೀಡಲಾಗದ ವಿದ್ಯಾರ್ಥಿಗಳಿಗೂ ತಾರತಮ್ಯ ಮಾಡದೆ ಸಮಾನ ಶಿಕ್ಷಣ ಹಂಚಿಕೆ ಮಾಡುವ ಇಂತಹ ಸಂಸ್ಥೆಗಳಿಗೆ ಬೆಲೆ ತೆರುವುದಾದರೂ ಹೇಗೆ ನೀವೇ ಯೋಚಿಸಿ. ಕುಬ್ಜವಾದ ಅರ್ಥವ್ಯವಸ್ಥೆಯೊಳಗೆ ಆಡಳಿತಮಂಡಳಿ, ಶಿಕ್ಷಕರು, ಪೋಷಕರು ಹಾಗೂ ಜತೆಯಲ್ಲಿ ತೃಪ್ತರಾಗಿ ಮನೆಯಲ್ಲೇ ಕಲಿಯುತ್ತಿರುವ ವಿದ್ಯಾರ್ಥಿಗಳೆಂಬ ಗಾಲಿ ಗಳಿರುವ ಇಂತಹ ಮಾದರಿ ಶಿಕ್ಷಣ ಸಂಸ್ಥೆಯ ಶಿಕ್ಷಣ ರಥದ ಎದುರು ನಿಂತಿರುವ ಯಾವ ಮಹಾಮಾರಿಯು ಓಡಲೇ ಬೇಕು.

*ಮುಕ್ತಶ್ರೀ ವಿಟ್ಲ ಹೆತ್ತವರು ಹಾಗೂ ಉಪನ್ಯಾಸಕರು.

ಕಾರ್ಮೆಲ್ ಕಾಲೇಜು ಮೊಡಂಕಾಪು ,ಬಿ.ಸಿ ರೋಡ್

- Advertisement -

Related news

error: Content is protected !!