Sunday, July 19, 2026
spot_imgspot_img
spot_imgspot_img

ಟೆಹ್ರಾನ್: ಇರಾನ್‌ನ ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ಅಮೆರಿಕ ದಾಳಿ

- Advertisement -
- Advertisement -

ಟೆಹ್ರಾನ್: ದಕ್ಷಿಣ ಟೆಹ್ರಾನ್‌ನಲ್ಲಿರುವ ಇರಾನ್‌ನ ತೈಲ ಸಂಗ್ರಹಣಾ ವ್ಯವಸ್ಥೆ ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದೆ.

ದಕ್ಷಿಣ ಟೆಹ್ರಾನ್‌ನಲ್ಲಿರುವ ತೈಲ ಸಂಗ್ರಹಣಾ ವ್ಯವಸ್ಥೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಆದರೆ, ಹತ್ತಿರದ ಸಂಸ್ಕರಣಾಗಾರಕ್ಕೆ ಯಾವುದೇ ಹಾನಿಯಾಗಿಲ್ಲ. ಈ ದಾಳಿಗಳು ನಗರದಾದ್ಯಂತ ಬೆಂಕಿ ಮತ್ತು ಹೊಗೆಯನ್ನು ಹರಡಿದೆ. ಅಲ್ಬೋರ್ಜ್ ಪ್ರಾಂತ್ಯದ ಕರಾಜ್ ನಗರದಲ್ಲಿಯೂ ಸ್ಫೋಟಗಳ ಶಬ್ದ ಕೇಳಿಬಂದಿದೆ. ದಾಳಿಯನ್ನು ಇಸ್ರೇಲ್‌ ಸೇನೆ ಖಚಿತಪಡಿಸಿದೆ.

ಇರಾನ್ ಇನ್ಮುಂದೆ ಮಧ್ಯಪ್ರಾಚ್ಯದ ಬೆದರಿಸುವ ರಾಷ್ಟ್ರವಲ್ಲ. ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಂತರ ಸಂಪೂರ್ಣ ಸೋತ ದೇಶವಾಗಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧವು ಎರಡನೇ ವಾರಕ್ಕೆ ಕಾಲಿಟ್ಟಿರುವುದರಿಂದ ಇರಾನ್ ತುಂಬಾ ಹೊಡೆತ ಪಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಸಿದ್ದಾರೆ.

ಇರಾನ್ ಮಧ್ಯಪ್ರಾಚ್ಯದಲ್ಲಿರುವ ತನ್ನ ನೆರೆಹೊರೆಯವರಿಗೆ ಕ್ಷಮೆಯಾಚಿಸಿ, ಶರಣಾಗತಿ ನೀಡಿದೆ. ಇನ್ಮುಂದೆ ಅದು ಅವರನ್ನು ಹೊಡೆಯುವುದಿಲ್ಲ ಎಂದು ಭರವಸೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ದಾಳಿಯಿಂದಾಗಿ ಇರಾನ್ ಈ ಭರವಸೆಯನ್ನು ನೀಡಬೇಕಾಯಿತು. ಇರಾನ್ ಮಧ್ಯಪ್ರಾಚ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಆಳಲು ನೋಡುತ್ತಿದೆ. ಆದರೆ, ಸಾವಿರಾರು ವರ್ಷಗಳಲ್ಲಿ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಇರಾನ್ ಮೊದಲ ಬಾರಿಗೆ ಸೋತಿದೆ. ಇದಕ್ಕಾಗಿ ಮಧ್ಯಪ್ರಾಚ್ಯ ದೇಶಗಳು ನನಗೆ ಧನ್ಯವಾದ ತಿಳಿಸಿವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

- Advertisement -

Related news

error: Content is protected !!