Monday, June 8, 2026
spot_imgspot_img
spot_imgspot_img

ಹನುಮಗಿರಿಗೆ ಬಂದಿಳಿದ ಫೈರ್ ಬ್ರಾಂಡ್ ಸಂಸದ ತೇಜಸ್ವಿ ಸೂರ್ಯ, ನಾಯಕಿ ಶೃತಿ

- Advertisement -
- Advertisement -

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಮತ್ತು ಚಲನ ಚಿತ್ರ ನಟಿ ಶೃತಿ ಪುತ್ತೂರಿಗೆ ಬಂದಿಳಿದ್ದಾರೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಪಾದಯಾತ್ರೆ ಮೆರವಣಿಗೆ ನಡೆಯಲಿದ್ದು, ಸಹಸ್ರಾರು ಕಾರ್ಯಕರ್ತರೊಂದಿಗೆ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಚಲನ ಚಿತ್ರ ನಟಿ ಶೃತಿ ಭಾಗವಹಿಸಲಿದ್ದಾರೆ.

ಸಂಸದ ತೇಜಸ್ವೀ ಸೂರ್ಯ ಮತ್ತು ಶೃತಿ ಈಗಾಗಲೇ ಪುತ್ತೂರು ಹೊರವಲಯದ ಹನುಮಗಿರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದು ಪುತ್ತೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ್ ಪಿ , ನಾಗರಾಜ್‌ ನಡುವಡ್ಕ, ಆ‌ರ್‌.ಸಿ ನಾರಾಯಣ, ಸೀತಾರಾಮ ರೈ, ಸಚಿನ್, ನವೀನ್ ಬನ್ನೂರು, ರಾಜೇಶ್ ಕಾವೇರಿ, ಗೌರಿ ಬನ್ನೂರು, ಯಶಸ್ವಿನಿ ಶಾಸ್ತ್ರಿ, ಉಷಾ ಮುಳಿಯ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!