Monday, April 29, 2024
spot_imgspot_img
spot_imgspot_img

ಕಾರು ಟ್ರಕ್ ನಡುವೆ ಭೀಕರ ಅಪಘಾತ; ಏಳು ಮಂದಿ ಮೃತ್ಯು

- Advertisement -G L Acharya panikkar
- Advertisement -

ಕಾರು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ಅಸ್ಸಾಂನ ದಿಬ್ರುಗಢದಲ್ಲಿ ನಡೆದಿದೆ.

ಮೃತರನ್ನು ಸತೀಶ್ ಕುಮಾರ್ ಅಗರ್ವಾಲ್ (45), ಪಾಂಪೆ ಅಗರ್ವಾಲ್ (42), ಕೃಷ್ಣ ಕುಮಾರ್ ಅಗರ್ವಾಲ್ (25), ನಿರ್ಮಲ್ ಕುಮಾರ್ ಅಗರ್ವಾಲ್ (70), ಪುಷ್ಪಾ ಸುರೇಖಾ ಅಗರ್ವಾಲ್ (65), ನಮಲ್ ಅಗರ್ವಾಲ್ ಮತ್ತು (45), ಗೋಲೋ ಅಗರ್ವಾಲ್ ಎಂದು ಗುರುತಿಸಲಾಗಿದೆ.

ಪ್ರಯಾಣಿಕರನ್ನು ಹೊತ್ತ ಟೊಯೊಟಾ ಇನ್ನೋವಾ ಕಾರು ಲೆಷ್ಟಕಟ್ಟಾ ಪ್ರದೇಶ ತಲುಪುವಾಗ ಹರಿಯಾಣ ನಂಬರ್ ಪ್ಲೇಟ್ ಹೊಂದಿದ್ದ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಲ್ಲಿ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರರು ಗಾಯಗೊಂಡಿದ್ದಾರೆ. ಟ್ರಕ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಮತ್ತೊಂದು ಕಡೆ ಇನ್ನೋವಾ ಕಾರು ನುಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ದಿಬ್ರುಗಡ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Related news

error: Content is protected !!