- Advertisement -
- Advertisement -





ರಾಯಚೂರು: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಹೊರವಲಯದ ಯರಮರಸ್ ಬೈಪಾಸ್ ಬಳಿ ನಡೆದಿದೆ.
ಮೃತಪಟ್ಟವರನ್ನು ಯರಮರಸ್ ಗ್ರಾಮದ ಮೇಸ್ತ್ರಿನಾಗಪ್ಪ ಉಪ್ಪಾರ (65) ಮತ್ತು ಪುತ್ರ ರಮೇಶ ಉಪ್ಪಾರ (38) ಎಂದು ಗುರುತಿಸಲಾಗಿದೆ.
ಬೈಪಾಸ್ ಟರ್ನಿಂಗ್‌ನಲ್ಲಿ ವೇಗವಾಗಿ ಹರಿದು ಬಂದ ಲಾರಿ ರಸ್ತೆ ಬದಿ ನಿಂತಿದ್ದ ನಾಗಪ್ಪ ಉಪ್ಪಾರ ಮತ್ತು ಪುತ್ರ ರಮೇಶ ಉಪ್ಪಾರ ಮೇಲೆ ಹರಿದಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಹರಿದ ರಭಸಕ್ಕೆ ದೇಹಗಳು ಛಿದ್ರಛಿದ್ರಗೊಂಡಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
- Advertisement -








