Sunday, June 29, 2025
spot_imgspot_img
spot_imgspot_img

ಟರ್ಕಿಯ ಏರೋಸ್ಪೇಸ್ ಕಂಪನಿ ಮೇಲೆ ಉಗ್ರರ ದಾಳಿ- ಮೂವರು ಸಾವು, 14 ಮಂದಿಗೆ ಗಾಯ

- Advertisement -
- Advertisement -

ಟರ್ಕಿಯ ರಾಜಧಾನಿ ಅಂಕಾರಾದ ಬಳಿಯ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ (ಟಿಎಐ) ಪ್ರಧಾನ ಕಚೇರಿಯ ಹೊರಗೆ ನಿನ್ನೆ ಸಂಜೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಉಗ್ರರ ಗುಂಪು ಕಟ್ಟಡದ ಒಳಗೆ ಬಂದಿದೆ. ಈ ವೇಳೆ ಓರ್ವ ಉಗ್ರ ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ. ಓರ್ವ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಅಲ್ಲಿನ ಕಂಪನಿಗಳಲ್ಲಿನ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಕಾರಾದಿಂದ ಉತ್ತರಕ್ಕೆ 40 ಕಿಲೋಮೀಟರ್ ದೂರದಲ್ಲಿರುವ ಸಣ್ಣ ಪಟ್ಟಣವಾದ ಕಹ್ರಾಮಂಕಾಜಾನ್‌ನಲ್ಲಿ ಈ ದಾಳಿ ನಡೆದಿದೆ.ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಅವರು ಈ ಹೇಯ ದಾಳಿಯನ್ನು ಖಂಡಿಸುತ್ತೇನೆ. ಭಯೋತ್ಪಾದಕನನ್ನು ಕೊಲ್ಲುವವರೆಗೂ ನಮ್ಮ ಹೋರಾಟವು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಅಂಕಾರಾದ ಕಹ್ರಾಮಂಕಜನ್ ಜಿಲ್ಲೆಯ ಆವರಣದ ಮೇಲೆ ಹೆಲಿಕಾಪ್ಟರ್‌ಗಳು ಹಾರುತ್ತಿರುವುದು ಕಂಡುಬಂದಿದೆ.

- Advertisement -

Related news

error: Content is protected !!