Saturday, June 28, 2025
spot_imgspot_img
spot_imgspot_img

ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ಬೆಳಗ್ಗೆ 7.03 ಗಂಟೆಗೆ ಕಾವೇರಿ ತೀರ್ಥೋದ್ಭವ.

- Advertisement -
- Advertisement -

ಮಡಿಕೇರಿ: ಕರ್ನಾಟಕದ  ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ಬೆಳಗ್ಗೆ 7.03 ಗಂಟೆಗೆ ಕಾವೇರಿ ತೀರ್ಥೋದ್ಭವ ಆಗಲಿದೆ.


 
ಸೆಪ್ಟಂಬರ್ 26 ರಂದು ಬೆಳಗ್ಗೆ 8.31 ಕ್ಕೆ ಸಲ್ಲುವ ತುಲಾಲಗ್ನದಲ್ಲಿ ಪತ್ತಾಯಕ್ಕೆ  ಅಕ್ಕಿ ಹಾಕುವುದು , ಅಕ್ಟೋಬರ್ 4 ರಂದು ಬೆಳಗ್ಗೆ 10.33 ಗಂಟೆಗೆ ಸಲ್ಲುವ ವೖಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂತ೯,ಅಕ್ಟೋಬರ್ 14 ರಂದು ಬೆಳಗ್ಗೆ 11.45 ಗಂಟೆಗೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು.ಅಕ್ಟೋಬರ್ 14 ರಂದು ಸಾಯಂಕಾಲ 5.15 ನಿಮಿಷಕ್ಕೆ ಸಲ್ಲುವ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವುದು ಎಂದು ತಿಳಿಸಿದ್ದಾರೆ.

ಅಕ್ಟೋಬರ್ 17 ರಂದು ಶನಿವಾರ ಬೆಳಗ್ಗೆ 7.03 ನಿಮಿಷಕ್ಕೆ ಸಲ್ಲುವ ಕನ್ಯಾ ಲಗ್ನದಲ್ಲಿ ಶ್ರೀ ಮೂಲಕಾವೇರಿ ತೀರ್ಥೋದ್ಭವ ಆಗಲಿದೆ ಎಂದು ಶ್ರೀ ತಲಕಾವೇರಿ ಭಾಗಮಂಡಲ ದೇವಾಲಯದ ಕಾರ್ಯನಿರ್ವಾಹಕ  ಅಧಿಕಾರಿ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!