- Advertisement -
- Advertisement -





ಕಾರವಾರ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಪರಿಣಾಮ ನೀರುಪಾಲಾಗುತಿದ್ದ ನಲವತ್ತು ಜನ ಪ್ರವಾಸಿಗರನ್ನು ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ರಕ್ಷಣಾ ತಂಡ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ನಡೆದಿದೆ.
ಮೂಡಂಗಿಯ ಗಣೇಶ, ರಮೇಶ ಎನ್ನುವವರಿಗೆ ಸೇರಿದ ಪ್ರವಾಸಿ ಬೋಟ್ ಇದಾಗಿದೆ.
ಪ್ರವಾಸೋದ್ಯಮ ಇಲಾಖೆಯ ಅನುಮತಿ ಇಲ್ಲದೇ 28 ಜನರನ್ನು ಕರೆದೊಯ್ಯುವ ಬದಲು 40 ಜನರನ್ನುಕರೆದೊಯ್ದಿದ್ದಾರೆ. ಮಿತಿಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿರಿಸಿ ಕರೆದೊಯ್ದ ಕಾರಣ ಬೋಟ್ ಮಗುಚಿದೆ. ಅದೃಷ್ಟವಶಾತ್ ಬೋಟ್‌ನಲ್ಲಿದ್ದ ಪ್ರವಾಸಿಗರು ಲೈಫ್ ಜಾಕೆಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- Advertisement -