


ಮದುವೆ ಮಂಟಪದಿಂದ ಓಡಿಹೋದ ವಧುವಿಗಾಗಿ 13 ದಿನಗಳವರೆಗೆ ವರ ಕಾದು ಕುಳಿತ ಘಟನೆ ರಾಜಸ್ಥಾನ ಸೈನಾ ಗ್ರಾಮದಲ್ಲಿ ನಡೆದಿದೆ.ಮೇ 3ರಂದು ನಡೆಯಬೇಕಿದ್ದ ಮದುವೆ ಕಡೆಗೂ ಮೇ 15ರಂದು ನಡೆದಿದೆ.
ಮೇ 03ರಂದು ಗುರು ಹಿರಿಯರ ಸಮ್ಮುಖದಲ್ಲಿ ವಿವಾಹ ನಡೆಸುವುದಾಗಿ ನಿರ್ಧರಿಸಲಾಗಿತ್ತು. ಆದರಂತೆ ಆ ದಿನವೇ ವಧು ಹಾಗು ವರ ಅವರ ಕುಟುಂಬದವರು ಮದುವೆ ಮಂಟಪಕ್ಕೆ ತಲುಪಿದ್ದಾರೆ. ಮದುವೆ ಶಾಸ್ತ್ರಗಳು ನಡೆಯುತ್ತಿದ್ದಂತೆ ವಧು ಹೊಟ್ಟೆ ನೋವು, ವಾಕರಿಕೆ ಬರುವುದಾಗಿ ವಾಶ್ ರೂಮಿಗೆ ಹೋಗಿದ್ದಾಳೆ. ಆದರೆ ಆದರೆ ಎಷ್ಟೇ ಹೊತ್ತಾದರೂ ವಧುವಿನ ಪತ್ತೆಯೇ ಇಲ್ಲ. ಅನುಮಾನಗೊಂಡು ಆಕೆಯ ಪೋಷಕರು ಹುಡುಕಾಟ ನಡೆಸಿದ್ದಾರೆ. ಆದರೆ ಕೆಲವೇ ಹೊತ್ತಿಗೆ ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರುವುದಾಗಿ ತಿಳಿದುಬಂದಿದೆ. ಆದರೆ ವರ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು 13 ದಿನಗಳವರೆಗೆ ಮದುವೆ ಮಂಟಪದಲ್ಲೇ ಕುಳಿತಿದ್ದಾನೆ.
ವರ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು ಕುಳಿತಿರುವುದನ್ನು ಕಂಡು ವಧುವಿನ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರ ಮಧ್ಯಪ್ರವೇಶದ ನಂತರ ಮೇ 15 ರಂದು ಮಹಿಳೆಯನ್ನು ಪತ್ತೆಹಚ್ಚಲಾಗಿದ್ದು, ಆಕೆಯ ಮನೆಗೆ ಒಪ್ಪಿಸಲಾಗಿದೆ. ಬಳಿಕ ಮಂಟಪದಲ್ಲೇ ಕಾದು ಕುಳಿತಿದ್ದ ವರನೊಂದಿಗೆ ಎಲ್ಲಾ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿಸಿದ್ದಾರೆ.