Saturday, May 4, 2024
spot_imgspot_img
spot_imgspot_img

ಸ್ವಿಮ್ಮಿಂಗ್ ಪೂಲ್’ಗೆ ಬಿದ್ದು ಬಾಲಕಿ ಸಾವು ಪ್ರಕರಣ; 45 ದಿನಗಳ ಬಳಿಕ 7 ಮಂದಿ ಅರೆಸ್ಟ್..!

- Advertisement -G L Acharya panikkar
- Advertisement -

ಅಪಾರ್ಟ್ಮೆಂಟ್‌ವೊಂದರ ಸ್ವಿಮ್ಮಿಂಗ್ ಪೂಲ್ ಗೆಬಿದ್ದು 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ 45 ದಿನಗಳ ಬಳಿಕ ರೋಚಕ ಟ್ವಿಸ್ಟ್ ಸಿಕ್ಕಿದ್ದು, 7 ಮಂದಿಯನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.

ಈಜುಕೊಳಕ್ಕೆ ಬಿದ್ದು ಮೃತಪಟ್ಟ ಬಾಲಕಿ ಮಾನ್ಯಾ ದಮೆರ್ಲಾ (9) ಎಂದು ಗುರುತಿಸಲಾಗಿದೆ.

ಪ್ರೆಸ್ಟೀಜ್ ಲೇಕ್ ಸೈಡ್ ಹೆಬಿಟಾಟ್ ಅಪಾರ್ಟ್‌ಮೆಂಟ್ ಸಮುಚ್ಚಯದ ಈಜುಕೊಳಕ್ಕೆ ಬಿದ್ದು ಬಾಲಕಿ ಮಾನ್ಯಾ ದಮೆರ್ಲಾ (9) ಮೃತಪಟ್ಟಿದ್ದ ಪ್ರಕರಣಕ್ಕೆ ಬಲವಾದು ತಿರುವು ಸಿಕ್ಕಿದೆ. ಈಜುಕೊಳದಲ್ಲಿ ಬಿದ್ದ ವೇಳೆ ಬಾಲಕಿಗೆ ವಿದ್ಯುತ್‌ ಶಾಕ್‌ ಸಂಭವಿಸಿ ಮೃತಪಟ್ಟಿದ್ದಾಳೆ ಎಂಬ ಸತ್ಯ ಬಯಲಾಗಿದೆ. ಈ ಪ್ರಕರಣಕ್ಕೆಸಂಬಂಧಿಸಿದಂತೆ ಸಮುಚ್ಚಯ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಏಳು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೆ ಸಮುಚ್ಚಯದ ನಿವಾಸಿ ರಾಜೇಶ್‌ಕುಮಾರ್ ದಮೆರ್ಲಾ ಅವರ ಮಗಳು ಮಾನ್ಯಾ ಡಿ.28ರಂದು ರಾತ್ರಿ ಮೃತಪಟ್ಟಿದ್ದರು. ಬಾಲಕಿಗೆ ಈಜು ಬರುತ್ತಿದ್ದರೂ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿ ಸತ್ತಿತ್ತು ಹೇಗೆ ಎಂಬ ಅನುಮಾನ ಅವರ ತಂದೆಗೆ ಕಾಡುತ್ತಿತ್ತು. ಜೊತೆಗೆ, ಬಾಲಕಿ ರಾತ್ರಿ ಹೊತ್ತಿನಲ್ಲಿ ಈಜಲು ಹೋಗುವ ಅವಶ್ಯಕತೆಯೂ ಇರಲಿಲ್ಲ. ಆದರೂ, ತಮ್ಮ ಮಗಳು ಸ್ವಿಮ್ಮಿಂಗ್‌ಪೂಲ್‌ಗೆ ಬಿದ್ದು ಸಾವನ್ನಪ್ಪಿದ್ದಕ್ಕೆ ತೀವ್ರ ನೊಂದುಕೊಂಡಿದ್ದ ಅವರ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಾಲಕಿ ತಂದೆ ದೂರಿನ ಅನ್ವಯ ಕೇಸ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿಯೂ ಸಾವಿಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಆ ನಂತರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವರದಿ ಹಸ್ತಾಂತರಿಸಲಾಗಿತ್ತು. ಎಫ್‌ಎಸ್‌ಎಲ್‌ ವರದಿಯಲ್ಲಿ ಬಾಲಕಿಗೆ ಕರೆಂಟ್ ಶಾಕ್‌ ತಗುಲಿರುವುದು ದೃಢಪಟ್ಟಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಪೋಲೀಸ್ ಅಧಿಕಾರಿಗಳು ನಿರ್ವಹಣೆ ಕೊರತೆಯಿಂದ ಈಜುಕೊಳದಲ್ಲಿ ವಿದ್ಯುತ್ ಹರಿಯುತ್ತಿದ್ದ ವಿಷಯ ಆರೋಪಿಗಳಿಗೆ ಗೊತ್ತಿತ್ತು. ಆದರೂ ದುರಸ್ತಿ ಕೈಗೊಂಡಿರಲಿಲ್ಲ. ಇವರ ನಿರ್ಲಕ್ಷ್ಯದಿಂದ ಮಾನ್ಯಾ ಮೃತಪಟ್ಟಿದ್ದಾಳೆಂದು ತಂದೆ ದೂರಿದ್ದರು. ಈ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಹೇಳಿದರು.

- Advertisement -

Related news

error: Content is protected !!