- Advertisement -
- Advertisement -



ವಿಟ್ಲ: ಕಳೆದ ಬಾರಿ ಮಳೆಗೆ ಕುಸಿದು ಬಿದ್ದಿದ್ದ ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಯ ತಡೆಗೋಡೆಯನ್ನು ವಿಟ್ಲದ ಪ್ರಿಯಾ ಶಾಮಿಯಾನದ ವತಿಯಿಂದ ಶ್ರಮದಾನದ ಮೂಲಕ ದುರಸ್ತಿ ಮಾಡಲಾಯಿತು.
ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಗೆ ನೂರಾರು ಮಂದಿ ಆಗಮಿಸಿ ಈಜಾಡುತ್ತಿದ್ದು, ಈಜು ಕಲಿಕೆ, ಈಜು ಸ್ಪರ್ಧೆ ಕೂಡ ನಡೆಯುತ್ತಿತ್ತು. ಆದರೆ ಕಳೆದ ವರ್ಷದ ಮಳೆಗೆ ಕೆರೆಯ ಒಂದು ಬದಿಯ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಇದರಿಂದ ಈಜುಪಟುಗಳಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡ ಪ್ರಿಯಾ ಶಾಮಿಯಾನದ ಬಾಬು ಕೆ.ವಿ ಮತ್ತು ಸಿಬ್ಬಂದಿಗಳು ತಡೆಗೋಡೆಯನ್ನು ದುರಸ್ತಿ ಮಾಡಿ ಸುಗಮವಾಗಿ ಈಜಾಡಲು ವ್ಯವಸ್ಥೆ ಮಾಡಿದ್ದಾರೆ.


- Advertisement -