Saturday, June 28, 2025
spot_imgspot_img
spot_imgspot_img

ಮಂಜೇಶ್ವರ: ಕಂಪೌಂಡ್‌ ಕುಸಿದು ಬಿದ್ದು ಮಗು ಗಂಭೀರ

- Advertisement -
- Advertisement -

ಮಂಜೇಶ್ವರ : ಆಟವಾಡುತ್ತಿದ್ದ ಎರಡೂವರೆ ವರ್ಷ ದ ಮಗುವಿನ ಮೇಲೆ ಕಂಪೌಂಡ್‌ ಕುಸಿದು ಬಿದ್ದು ಗಂಭೀರ ಗಾಯಗೊಂಡ ಘಟನೆ ಮಂಜೇಶ್ವರ ಕುಂಜತ್ತೂರು ಬಳಿ ನಡೆದಿದೆ.

ಮಂಜೇಶ್ವರದ ಕುಂಜತ್ತೂರು ಸನ್ನಡ್ಕದಲ್ಲಿ ವಾಸವಾಗಿರುವ ಉತ್ತರ ಪ್ರದೇಶ ನಿವಾಸಿ ಮಹಮ್ಮದ್ ಅಮೀನ್ ಎಂಬವರ ಪುತ್ರ ಶೆರ್ಶಾಝ್ ಶಾ (2.5) ಗಂಭೀರ ಗಾಯಗೊಂಡ ಬಾಲಕನಾಗಿದ್ದಾನೆ.

ಮನೆ ಸಮೀಪದ ಖಾದರ್ ಎಂಬವರ ಮನೆಯ ಕಂಪೌಂಡ್‌ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ. ವಾರ್ಡ್ ಸದಸ್ಯ ಹಾಗೂ ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

- Advertisement -

Related news

error: Content is protected !!