Saturday, April 20, 2024
spot_imgspot_img
spot_imgspot_img

ದಿ ಕಂಜ್ಯೂರಿಂಗ್‌ ಸಿನೆಮಾದ ಬಂಗಲೆ 11 ಕೋಟಿ ರೂಪಾಯಿಗೆ ಸೇಲ್‌..!

- Advertisement -G L Acharya panikkar
- Advertisement -

ಯುಎಸ್‍ನಲ್ಲಿ ದೆವ್ವ ಬಂಗಲೆ ಎಂದೇ ಕರೆಸಿಕೊಳ್ಳಲ್ಪಡುತ್ತಿದ್ದ ಬಂಗಲೆಯೊಂದು ಬರೋಬ್ಬರಿ 1.5 ಮಿಲಿಯನ್ ಡಾಲರ್​ಗೆ , ಅಂದರೆ ಸರಿ ಸುಮಾರು 11,63,65,125 ರೂ.ಗಳಿಗೆ ಮಾರಾಟವಾಗಿದೆಯಂತೆ! ದಿ ಕಂಜ್ಯೂರಿಂಗ್ ಸಿನೆಮಾಗೆ ಸ್ಪೂರ್ತಿ ನೀಡಿತ್ತು ಈ ಭೂತ ಬಂಗಲೆ..!

ರೋಡ್ ಐಲ್ಯಾಂಡ್‍ನಲ್ಲಿರುವ ಭೂತ ಬಂಗಲೆಯ ವಿಶೇಷವೇನು ಗೊತ್ತೇ?
ಇದು 2013 ರಲ್ಲಿ ಬಿಡುಗಡೆಯಾಗಿದ್ದ ಅಲೌಕಿಕ ಶಕ್ತಿಗಳ ಕುರಿತ ಹಾರರ್ ಸಿನಿಮಾ ‘ದಿ ಕಂಜ್ಯೂರಿಂಗ್‍’ಗೆ ಸ್ಪೂರ್ತಿ ನೀಡಿದ್ದ ರೋಡ್ ಐಲ್ಯಾಂಡ್‍ನಲ್ಲಿರುವ ಭೂತ ಬಂಗಲೆ. 1726 ರಲ್ಲಿ ಕಟ್ಟಲಾಗಿರುವ ಈ ಬಂಗಲೆಯನ್ನು, ಅಮೇರಿಕಾ ಅತೀ ಭಯಾನಕ ಹಾಂಟೆಡ್ ಮನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ವಾಲ್‍ಸ್ಟ್ರೀಟ್ ಜರ್ನಲ್ ಪ್ರಕಾರ, 1971 ರಿಂದ 1980 ರ ವರೆಗೆ ಈ ಮನೆಯಲ್ಲಿ ವಾಸಿಸಿದ್ದ ಆಯಂಡ್ರಿಯಾ ಪೆರೋನ್ ಅವರು, ಆ ಮನೆಯಲ್ಲಿ ತನ್ನ ಕುಟುಂಬದವರು ಅನೇಕ ಬಾರಿ ಅಲೌಕಿಕ ಸಂಗತಿಗಳು ಅಥವಾ ಅನುಭವಗಳನ್ನು ಎದುರಿಸಬೇಕಾಗಿ ಬಂದಿತ್ತು ಎಂದು ಹೇಳಿದ್ದಾರೆ. ತನ್ನ ವಯಸ್ಸಾದ ತಾಯಿ ಗಾಳಿಯಲ್ಲಿ ತೇಲಾಡಿದ್ದರಿಂದ ಹಿಡಿದು ಕಣ್ಣಿಗೆ ಕಾಣದ ಶಕ್ತಿಯೊಂದು ಕೆನ್ನೆಗೆ ಹೊಡೆದಿದ್ದರ ವರೆಗೆ ಹಲವಾರು ಘಟನೆಗಳನ್ನು ಮನೆಯವರು ಕಂಡಿದ್ದಾರೆ.

ಈ ಹಾರರ್ ಮನೆ ಖರೀದಿಸಿದವರು ಯಾರು?
ಪ್ಯಾರನಾರ್ಮಲ್ ಇನ್‍ವೆಸ್ಟಿಗೇಟರ್ ಜೋಡಿ, ಜೆನ್ ಮತ್ತು ಕೋರಿ ಹೇನ್ಜೆನ್, 2019 ರಲ್ಲಿ ಆ ಭೂತ ಬಂಗಲೆಯನ್ನು 4,39,00 ಡಾಲರ್‍ಗೆ ಅಂದರೆ ಸರಿ ಸುಮಾರು 3,40,57, 620 ರೂ.ಗಳಿಗೆ ಖರೀದಿಸಿದರು. 2021ರ ಸೆಪ್ಟೆಂಬರ್ ನಲ್ಲಿ ಅವರು ಅದನ್ನು ಮಾರಾಟಕ್ಕೆ ಇಟ್ಟರು. ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಜಾಕ್ವೆಲಿನ್ ನ್ಯೂನೆಜ್ ಬರೋಬ್ಬರಿ 1.5 ಮಿಲಿಯನ್ ಡಾಲರ್​ಗೆ ಈ ಬಂಗಲೆಯನ್ನು ಖರೀದಿಸಿದ್ದಾರೆ.

- Advertisement -

Related news

error: Content is protected !!