Monday, June 8, 2026
spot_imgspot_img
spot_imgspot_img

2 ದಿನಗಳ ಹಿಂದೆ ನದಿ ದಾಟುವಾಗ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಕಳೆದ 2 ದಿನಗಳ ಹಿಂದೆ ನದಿ ದಾಟುವಾಗ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ್ನಾಲು ಗ್ರಾಮದ ಚೇರೋಳಿಯಲ್ಲಿ ನಡೆದಿದೆ.

ನೀರು ಪಾಲಾಗಿದ್ದ ವ್ಯಕ್ತಿ ಆನಂದ ಎಂದು ಗುರುತಿಸಲಾಗಿದೆ.

ಆನಂದ ಅವರು ನಾಡ್ನಾಲಿನಲ್ಲಿ ತೋಟವೊಂದರ ಕೆಲಸಕ್ಕಾಗಿ ಹೋಗುವ ಸಂದರ್ಭದಲ್ಲಿ ನದಿಯನ್ನು ಹಗ್ಗದ ಮೂಲಕ ದಾಟುತ್ತಿದ್ದಾಗ ಪ್ರವಾಹದಿಂದ ನೀರು ಪಾಲಾಗಿದ್ದು, ಕಳೆದ 2 ದಿನಗಳಿಂದ ಕಾರ್ಕಳ ಅಗ್ನಿಶಾಮಕ ದಳ ನದಿಯಲ್ಲಿ ವ್ಯಾಪಕ ಹುಡುಕಾಟ ನಡೆಸಿತ್ತು. ಆದರೆ ಮೃತದೇಹ ಸಿಕ್ಕಿರಲಿಲ್ಲ ಎಂದು ತಿಳಿದು ಬಂದಿದೆ.
ನಂತರ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡ ನದಿಯಲ್ಲಿ ಸುಮಾರು 4 ಕಿ.ಮೀ.ನಷ್ಟು ಹುಡುಕಾಟ ನಡೆಸಿ ಆನಂದ ಅವರ ಮೃತದೇಹ ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!