Saturday, June 28, 2025
spot_imgspot_img
spot_imgspot_img

ಮಂಜೇಶ್ವರ: ಬಾಲಕಿ ಕುಸಿದು ಬಿದ್ದು ಮೃತ್ಯು

- Advertisement -
- Advertisement -

ಮಂಜೇಶ್ವರ: ಮನೆಯಲ್ಲಿ ಆಟ ಆಡುತ್ತಿದ್ದ ವೇಳೆ ಬಾಲಕಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಜೇಶ್ವರ ಮಜಿಬೈಲ್ ಸಮೀಪದ ಕರಿಬೈಲ್ ಹೊಸಗದ್ದೆ ಎಂಬಲ್ಲಿ ಸಂಭವಿಸಿದೆ.

ಇರಿಬೈಲ್ ಹೊಸಗದ್ದೆ ನಿವಾಸಿ ಡಾನಿಲ್ ಡಿ’ಸೋಜಾ ಅವರ ಪುತ್ರಿ ಪ್ರಿನ್ಸಿಲ್ಲ (8) ಮೃತ ಬಾಲಕಿ.

ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿ ನೀರು ಕೇಳಿ ಕುಡಿದಿದ್ದಾಳೆ. ಸ್ವಲ್ಪ ಹೊತ್ತಿನಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಹೃದಯಾಘಾತ ಸಾವಿಗೆ ಕಾರಣವೆನ್ನಲಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!