Saturday, June 28, 2025
spot_imgspot_img
spot_imgspot_img

ಹೆಂಡತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ‌ ಕೋವಿಯೊಂದಿಗೆ ಪೊಲೀಸರಿಗೆ ಶರಣಾದ ಪತಿ..!

- Advertisement -
- Advertisement -

ಕೊಡಗು: ಹೆಂಡತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಕೊಡಗಿನ ವಿರಾಜಪೇಟೆ ಸಮೀಪದ ಬೆಟೋಳಿಯಲ್ಲಿ ನಡೆದಿದೆ.

ಶಿಲ್ಪ (36)ಮೃತಪಟ್ಟ ದುರ್ದೈವಿ. ಶಿಲ್ಪ ಪತಿ ನಾಯಕಂಡ ಬೋಪಣ್ಣ (45) ಎಂಬಾತನಿಂದ ಈ ಕೃತ್ಯ ನಡೆದಿದೆ.

ಪತ್ನಿಯೊಂದು ಕೊಲೆ ಮಾಡಿದ ಬಳಿಕ ಬೋಪಣ್ಣ ಕೋವಿಯೊಂದಿಗೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಹತ್ಯೆಗೆಕಾರಣವೆಂದು ತಿಳಿದುಬಂದಿಲ್ಲ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ನಡೆಸುತ್ತಿದ್ದಾರೆ. ಈ ಹತ್ಯೆಗೆ ಬೆಟೋಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

- Advertisement -

Related news

error: Content is protected !!