Wednesday, June 26, 2024
spot_imgspot_img
spot_imgspot_img

ವಿಟ್ಲ : ‘ದಿ ನ್ವಾಲೇಜ್ ಹಬ್, ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್’ಗೆ ಶಿಕ್ಷಣ ತಜ್ಞ, ವಿಶ್ವ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿ ಕುಮಾರ್ ಭೇಟಿ

- Advertisement -G L Acharya panikkar
- Advertisement -

“ಶೈಕ್ಷಣಿಕ ಪ್ರಗತಿಗೆ ಮಕ್ಕಳ ಜೊತೆ ಸಂವಹನ ನಡೆಸುವ ಅಭ್ಯಾಸ ಬೆಳೆಸಿ”

ವಿಟ್ಲ: ಇತ್ತೀಚೆಗೆ ವಿಟ್ಲದಲ್ಲಿ ಉದ್ಘಾಟನೆಗೊಂಡ ‘ದಿ ನ್ವಾಲೇಜ್ ಹಬ್, ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್’ಗೆ ಖ್ಯಾತ ಶಿಕ್ಷಣ ತಜ್ಞ, ಸಂಶೋಧಕ, ವಿಶ್ವ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿ ಕುಮಾರ್ ಎಲ್.ಪಿ. ಭೇಟಿ ನೀಡಿದರು.

‘ದಿ ನ್ವಾಲೇಜ್ ಹಬ್’ ತಂಡದೊಂದಿಗೆ ಸಂವಾದ ನಡೆಸಿದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಹೆತ್ತವರ ಪಾತ್ರ ಅತೀ ಮುಖ್ಯವಾಗಿದ್ದು‌ ಹೆತ್ತವರು ಕಾಳಜಿ ವಹಿಸದಿದ್ದರೆ ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದು ಖ್ಯಾತ ಶಿಕ್ಷಣ ತಜ್ಞ, ಸಂಶೋಧಕ, ವಿಶ್ವ ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿ ಕುಮಾರ್ ಎಲ್.ಪಿ. ಹೇಳಿದರು.

ಮಕ್ಕಳ ಶೈಕ್ಷಣಿಕ ಬದುಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಮಯ ಅತೀ ಮುಖ್ಯವಾಗಿದೆ‌. ಈ ಸಮಯದಲ್ಲಿ ಹೆತ್ತವರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಪ್ರತೀ ದಿನ 2ರಿಂದ 3 ಗಂಟೆ ಮಕ್ಕಳ ಜೊತೆ ಕುಳಿತು ಅವರ ದೈನಂದಿನ ಶಿಕ್ಷಣದ ಪ್ರಗತಿಯ ಬಗ್ಗೆ ಗಮನಹರಿಸಬೇಕು ಎಂದು ಅವರು ಹೇಳಿದರು.

ಮಕ್ಕಳ ದೈನಂದಿನ ತರಗತಿ ಹಾಗೂ ಪಠ್ಯದ ಬಗ್ಗೆ ಹೆತ್ತವರು ಮೇಲ್ನೋಟ ವಹಿಸದಿದ್ದರೆ ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗದು. ಹೆತ್ತವರು ತಮ್ಮ ಮಕ್ಕಳ ಜೊತೆ ಪಠ್ಯ, ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಬಗ್ಗೆ ಚರ್ಚೆ ನಡೆಸಬೇಕು. ಮಕ್ಕಳ ಜೊತೆ ಹೆತ್ತವರು ಮುಕ್ತವಾಗಿ ಸಂವಹನ ನಡೆಸುವ ಅಭ್ಯಾಸ ಬೆಳೆಸಬೇಕು ಎಂದು ಹೇಳಿದರು.

ದಿ ನ್ವಾಲೇಜ್ ಹಬ್ ತಂಡ ನಡೆಸುವ ಕೌನ್ಸೆಲಿಂಗ್, ಕೆರಿಯರ್ ಗೈಡನ್ಸ್, ಸ್ಕಿಲ್ ಡೆವಲಪ್ಮೆಂಟ್, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಕಾರ್ಯಕ್ರಮ ಹಾಗೂ ಟ್ಯೂಷನ್ ವ್ಯವಸ್ಥೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ತುಂಬಾ ಸಹಕಾರಿಯಾಗಿದೆ. ಈ ರೀತಿಯ ಉತ್ತಮ ವ್ಯವಸ್ಥೆ ಸಮಾಜದ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುವಂತಾಗಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬ್ಯಾರೀಸ್ ಎಂಜಿನಿಯರಿಂಗ್ ಕಾಲೇಜಿ‌ನ ಉಪನ್ಯಾಸಕ ಮುಸ್ತಫಾ ಖಲೀಲ್, ವಿಟ್ಲ ಡಿ ಗ್ರೂಪ್ ಪ್ರಧಾನ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ದಿ ನ್ವಾಲೇಜ್ ಹಬ್ ವಿಟ್ಲ ಇದರ ವ್ಯವಸ್ಥಾಪಕ ಮುಹಮ್ಮದ್ ಅಲಿ ವಿಟ್ಲ, ದಿ ನ್ವಾಲೇಜ್ ಹಬ್ ಬಿ.ಸಿ.ರೋಡ್ ಕೈಕಂಬ ಇದರ ನಿರ್ವಾಹಕಿ ನಝ್ರೀನ್ ಶಾ ಬಂಟ್ವಾಳ, ಪತ್ರಕರ್ತ ಇಮ್ತಿಯಾಝ್ ಶಾ ತುಂಬೆ ಉಪಸ್ಥಿತರಿದ್ದರು.

- Advertisement -

Related news

error: Content is protected !!