Thursday, July 23, 2026
spot_imgspot_img
spot_imgspot_img

ಮೂಡಬಿದಿರೆ: ಎಸ್‌ಎಲ್‌ವಿ ಬುಕ್‌ ಹೌಸ್‌ ನ ನೂತನ ಮಳಿಗೆ ಶುಭಾರಂಭ

- Advertisement -
- Advertisement -

ಕಟೀಲು ವೆಂಕಟರಮಣ ಅಸ್ರಣ್ಣರವರಿಂದ ದೀಪ ಪ್ರಜ್ವಲನೆ: ಗಣ್ಯರಿಂದ ಶುಭಹಾರೈಕೆ

ಮೂಡಬಿದಿರೆ: ಎಸ್‌ಎಲ್‌ವಿ ಬುಕ್‌ ಹೌಸ್‌ ನ ನೂತನ ಮಳಿಗೆ ಮೂಡಬಿದಿರೆಯಲ್ಲಿ ಶುಭಾರಂಭಗೊಂಡಿತು. ನೂತನ ಪುಸ್ತಕ ಮಳಿಗೆಯನ್ನು ಶ್ರೀ ಕ್ಷೇತ್ರ ಕಟೀಲಿನ ವೆಂಕಟರಮಣ ಆಸ್ರಣ್ಣ ರವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೆಂಕಟರಮಣ ಆಸ್ರಣ್ಣ ರವರ ಧರ್ಮ ಪತ್ನಿ ಲಕ್ಷ್ಮೀಯವರು ನೂತನ ಪುಸ್ತಕ ಮಳಿಗೆಗೆ ಶುಭಹಾರೈಸಿದರು.

ದಿವಾಕರ ದಾಸ್ ನೇರ್ಲಾಜೆ ಮಲಕತ್ವದ ಎಸ್‌ಎಲ್‌ವಿ ಬುಕ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈಗಾಗಲೇ ರಾಜ್ಯಾದ್ಯಂತ 7 ಶೋರೂಮ್ ಗಳನ್ನು ಹೊಂದಿದ್ದು ,ಇದೀಗ 8 ನೇ ಶಾಖೆಯು ಮೂಡಬಿದಿರೆಯಲ್ಲಿ ಶುಭಾರಂಭ ಗೊಂಡಿದೆ.

ಮೂಡಬಿದಿರೆಯಲ್ಲಿ ಶುಭಾರಂಭದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ದಿವಾಕರ ದಾಸ್ ರವರು ’ಸಾವಿರರು ಶಾಲೆಗಳಿಗೆ ಈಗಾಗಾಲೇ ನಾವು ಎಸ್‌ಎಲ್‌ವಿ ಬುಕ್ಸ್‌ ಏಜೆನ್ಸಿಸ್‌ ನ ಮೂಲಕ ವ್ಯವಹಾರ ನಡೆಯುತ್ತಿದ್ದು, ಮೂಡಬಿದಿರೆಯ ಜನರ ಅಪೇಕ್ಷೆಯಂತೆ ಪುಸ್ತಕಗಳು, ಮತ್ತು ಸ್ಟೇಷನರಿ ಆರಂಭಿಸಿದ್ದೇವೆ. ನಮ್ಮಲ್ಲಿ ಎಲ್ಲಾ ತರಹದ ಸಿಬಿಎಸ್‌ಸಿ, ಐಸಿಐಸಿ ಬುಕ್ಸ್‌, ಮತ್ತು ಸ್ಟೇಷನರಿಗಳು ಲಭ್ಯವಿದ್ದು, ಶುಭಾರಂಭದ ಪ್ರಯುಕ್ತ ವಿದ್ಯಾರ್ಥಿಗಳಿಗೆ 10 ರಿಂದ 15% ರಷ್ಟು ಡಿಸೌಂಟ್‌ ನೀಡಲಿದ್ದೇವೆ ಎಂದು ಹೇಳಿದರು.

ಎಕ್ಸೆಲೆಂಟ್‌ ವಿದ್ಯಾ ಸಂಸ್ಥೆಯ ಅದ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಯುವರಾಜ್ ಜೈನ್ ನೂತನ ಮಳಿಗೆಗೆ ಶುಭ ಹಾರೈಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಸುರೇಶ್‌ ಪುತ್ತೂರಾಯ, ಸಹಕಾರ ಭಾರತೀಯ ಮಾಜಿ ರಾಷ್ಟೀಯ ಉಪಾಧ್ಯಕ್ಷರಾದ ಕೊಂಕೋಡಿ ಪದ್ಮನಾಭ, ರಾಜೀವಿ ಶೆಟ್ಟಿ, ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಅರುಣ್‌ ಕುಮಾರ್‌ ಪುತ್ತಿಲ, ರಾಜರಾಮ್‌ ಶೆಟ್ಟಿ ಕೋಲ್ಪೆಗುತ್ತು, ಲೋಕೇಶ್‌ ಪರ್ಲಡ್ಕ, ಚಂದ್ರಕಾಂತ್‌ ಬೆಂಗಳೂರು, ಮೂಲ್ಕಿ ಮೂಡಬಿದ್ರೆಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಅಶ್ವಥ್‌ ಪಣಪ್ಪಿಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸುರೇಶ್ ದಾಸ್ ನೇರ್ಲಾಜೆ, ಹೇಮಾವತಿ ದಿವಾಕರ್ ದಾಸ್ , ಮತ್ತು ಎಸ್ ಎಲ್ ವಿ ಸಂಸ್ಥೆಯ ಸಿಬ್ಬಂದಿಗಳು ಅತಿಥಿಗಳನ್ನು ಸ್ವಾಗತಿಸಿದರು.

ರಾಮದಾಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

- Advertisement -

Related news

error: Content is protected !!