- Advertisement -
- Advertisement -




ಮಂಗಳೂರು : MRPL ಅಧೀನದಲ್ಲಿರುವ OMPL ಕಂಪೆನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಯುವಕನನ್ಜು ಅಸ್ಸಾಂ ಮೂಲದ ಸಮಾನ್ ಅಲಿ (26) ಎಂದು ಗುರುತಿಸಲಾಗಿದೆ.
ಸಮಾನ್ ಅಲಿ ಕಾಂಟ್ರ್ಯಾಕ್ ಕಂಪೆನಿಯೊಂದರ ಮೂಲಕ OMPL ಕಂಪೆನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳಿದ್ದ ಅಲಿ ಶುಕ್ರವಾರ ಬೆಳಗ್ಗಿನ ಜಾವ 4 ಗಂಟೆಯ ವರೆಗೆ OMPL ನ ಒಳಗೆ ಕೆಲಸದಲ್ಲಿ ನಿರತನಾಗಿರುವುದು ಅಲ್ಲಿನ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಆ ಬಳಿಕ ಆತ ಸಿಸಿ ಟಿವಿಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದ.
ಸುಮಾರು 15 ಅಡಿ ಎತ್ತರದ ಕಾಂಪೌಂಡ್ ಹಾರಿ ಸುಮಾರು 300-400 ಮೀಟರ್ ದೂರಕ್ಕೆ ನಡೆದು ಬಂದು ಬಳಿಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
- Advertisement -